ಆರ್.ಆರ್ ನಗರ ‘ಕೈ’ ಅಭ್ಯರ್ಥಿ ವಿರುದ್ಧ ಎಫ್ ಐ ಆರ್ ವಿಚಾರ: ಎಂಎಲ್ ಸಿ ಹೆಚ್,ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ….

ಮೈಸೂರು,ಅಕ್ಟೋಬರ್,15,2020(www.justkannada.in):  ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಎಫ್ ಐಆರ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಮಾಜಿ ಸಿಎಂ, ಹಾಲಿ ಸಿಎಂ ಎಲ್ಲರಿಗೂ ಒಂದೇ ನಿಯಮ. ಎಲ್ಲವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಯಾರಿಗೆ ಎಲ್ಲಿವರೆಗೆ ಪ್ರವೇಶವಿರುತ್ತೆ ಅನ್ನೋದು ಗೊತ್ತಿದೆ. ಹೀಗಿದ್ದೂ ಕೆಲವರು ನೂಕುನುಗ್ಗಲು ಮಾಡಿಕೊಂಡು ಒಳಗೆ ಹೋಗಿದ್ದರು. ಅಂಥವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಎಲ್ಲವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.fir-against-rr-nagar-congress-candidate-mlc-h-vishwanath-reaction

ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆ ಹಿನ್ನೆಲೆ ಎಲ್ಲಾ ಮೂರು ಪಕ್ಷದ ಅಭ್ಯರ್ಥಿಗಳೂ ನಾವೇ ಗೆಲ್ಲುತ್ತೇವೆ ಅಂತಾರೆ. ನಾವೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಅಂತಲೇ ಹೇಳುತ್ತೇವೆ. ಅಂತಿಮವಾಗಿ ಗೆಲುವು, ಸೋಲು ನಿರ್ಧಾರ ಮಾಡೋದು  ಮತದಾರರು ಎಂದು ಹೆಚ್.ವಿಶ್ವನಾತ್ ಅಭಿಪ್ರಾಯ ವ್ಯಕ್ತಪಡಿಸಿದರು.

Key words: FIR -against -RR nagar-congress candidate-MLC -H, Vishwanath-reaction