Sunday, August 9, 2026

BDA Apartments

Home Front Page ಏಷ್ಯಾನೆಟ್ ನ್ಯೂಸ್, ಮೀಡಿಯಾ ಒನ್ ಪ್ರಸಾರ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸಚಿವಾಲಯ

ಏಷ್ಯಾನೆಟ್ ನ್ಯೂಸ್, ಮೀಡಿಯಾ ಒನ್ ಪ್ರಸಾರ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸಚಿವಾಲಯ

ನವದೆಹಲಿ, ಮಾರ್ಚ್ 7, 2020 (www.juskannada.in): ಐ & ಬಿ ಸಚಿವಾಲಯವು ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಮೇಲೆ 48 ಗಂಟೆಗಳ ನಿಷೇಧವನ್ನು ತೆಗೆದುಹಾಕಿದೆ.

ಕೇರಳ ಮೂಲದ ಟೆಲಿವಿಷನ್ ನ್ಯೂಸ್ ಚಾನೆಲ್ಗಳು ಮತ್ತೆ ಪ್ರಸಾರ ಮಾಡಲು ಅವಕಾಶ ನೀಡಿದೆ. ಮೀಡಿಯಾ ಒನ್ ಟಿವಿ ಸಂಪಾದಕ ಸಿಎಲ್ ಥಾಮಸ್ ಈ ನಿಷೇಧವನ್ನು ‘ದುರದೃಷ್ಟಕರ ಮತ್ತು ಖಂಡನೀಯ’ ಎಂದಿದ್ದರು.

‘ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಎತ್ತಿ ತೋರಿಸಿ, ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ವರದಿ ಮಾಡಿದ್ದವು ಎನ್ನಲಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಆ ಚಾನೆಲ್​ಗಳನ್ನು 48 ಗಂಟೆಗಳ ಕಾಲ ನಿಷೇಧಿಸಿ, ಶೋಕಾಸ್​ ನೋಟಿಸ್​ ನೀಡಿತ್ತು.

ಅದರಂತೆ ಮಾಹಿತಿ ಮತ್ತು ಪ್ರಸರಣ ವಿಭಾಗವು ಮೀಡಿಯಾ ಒನ್​ ಮತ್ತು ಏಷ್ಯಾನೆಟ್​ ನ್ಯೂಸ್​ ಚಾನೆಲ್​​ಗಳನ್ನು ಮಾರ್ಚ್​​ 6 ಸಂಜೆ 7.30ರಿಂದ ಮಾರ್ಚ್​​ 8 ಸಂಜೆ 7.30ರವರೆಗೆ ನಿಷೇಧಿಸಿತ್ತು.