ಬೆಂಗಳೂರು,ಫೆಬ್ರವರಿ,20,2026 (www.justkannada.in): ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಉಚಿತ ಭಾಗ್ಯಗಳನ್ನು ಘೋಷಿಸುವುದಕ್ಕೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು ಈ ವಿಚಾರವನ್ನ ಪ್ರಸ್ತಾಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕುಟುಕಿದ್ದಾರೆ.
ಈ ಕುರಿತು ಮಾತನಾಡಿರುವ ಅಶ್ವಥ್ ನಾರಾಯಣ್, ಪಕ್ಷಗಳು ಜನರ ಕ್ಷೇಮಾಭಿವೃದ್ದಿಗಾಗಿ ಯೋಜನೆ ನೀಡಬೇಕು ಚುನಾವಣೆ ಗೆಲ್ಲಲು ಉಚಿತ ಯೋಜನೆ ಘೋಷಣೆ ಮಾಡುತ್ತಾರೆ. ಜನರನ್ನು ಗುರಿಯಾಗಿಟ್ಟುಕೊಂಡು ಯೋಜನೆ ಮಾಡಲ್ಲ. ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ಮಾಡುತ್ತಾರೆ. ಚುನಾವಣೆ ದೃಷ್ಠಿಯಿಂದ ಉಚಿತ ಯೋಜನೆ ನಿಡಬಾರದು ಸರ್ಕಾರದಲ್ಲಿ ಅಧಿಕಾರ ಇಟ್ಟುಕೊಂಡು ಯೋಜನೆ ಕೊಡುವುದು ಖಂಡನೀಯ ಎಂದರು.
ಉಚಿತ ಯೋಜನೆ ನೀಡಿ ನಾಡನ್ನು ವ್ಯವಸ್ಥೆಯನ್ನ ಹಾಳು ಮಾಡುತ್ತಾರೆ ಇಂತಹ ಜನ ವಿರೋಧಿ ಸರ್ಕಾರ ಬಗ್ಗೆ ಸರಿಯಾದ ತೀರ್ಪು ಬರಬೇಕು ಎಂದು ಶಾಸಕ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
Key words: Supreme Court, free, guarantee, Ashwath Narayan, government







