ಮಂಗಳೂರಿನಲ್ಲಿ ಇಬ್ಬರು ಅನುಮಾನಸ್ಪದ ವ್ಯಕ್ತಿಗಳ ಬಂಧನ…

ಮಂಗಳೂರು,ಆ,24,2019(www.justkannada.in):  ಮಂಗಳೂರಿನ ಲಾಡ್ಜ್ ನಲ್ಲಿದ್ದ ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನ ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಮಾಹಿತಿ ನೀಡಿದ್ದಾರೆ. ಜಮ್ಮುಕಾಶ್ಮೀರ ಮೂಲದ ಶೌಕತ್ ಅಹ್ಮದ್ ಲೋನೆ ಚಂಢಿಗಡ ಮೂಲದ ಬಲ್ಚಿಂದರ್ ಸಿಂಗ್ ಬಂಧಿತರು. ಇವರಿಬ್ಬರನ್ನ ಅಗಸ್ಟ್ 17 ರಂದು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಡಬ್ಲ್ಯು ಹೆಚ್ ಒ ನಿರ್ದೇಶಕರು ಎಂದು ಹೇಳಿಕೊಂಡು ಮಂಗಳೂರಿನ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಇತ್ತೀಚೆಗೆ  ಮಂಗಳೂರಿನ ಪಂಪ್ ವೆಲ್ ನ ಲಾಡ್ಜ್ ವೊಂದರಲ್ಲಿ ಇದ್ದ 8 ಮಂದಿ ಅನುಮಾನಸ್ಪದ ವ್ಯಕ್ತಿಗಳನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದರು.

Key words: Arrest – two- suspects – Mangalore.