ಮಾಧ್ಯಮ, ಮಾನವ ಹಕ್ಕುಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲ್ : ಮೂವರು ಯುವತಿಯರ ಬಂಧನ…

kannada t-shirts

ಮೈಸೂರು,ಜನವರಿ,21,2021(www.justkannada.in): ಮೂವರು ಯುವತಿಯರು ಮಾಧ್ಯಮ, ಮಾನವ ಹಕ್ಕುಗಳ ಹೆಸರಲ್ಲಿ ವೈದ್ಯರೊಬ್ಬರಿಗೆ  ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕಲು ವಿಫಲ ಯತ್ನ ನಡೆಸಿರುವ ಪ್ರಕರಣ ಬೆಳಕಿಗೆ ಬಂದ್ದಿದ್ದು ಇದೀಗ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.arrest-three-young-women-name-media-human-rights-blackmail-mysore

arrest-three-young-women-name-media-human-rights-blackmail-mysore

arrest-three-young-women-name-media-human-rights-blackmail-mysore

ಅಮ್ರೀನ್, ಆಯಿಷಾ ಬಾಯಿ, ಶಹೀನಾ ನವೀದ್ ಬಂಧಿತ ಆರೋಪಿಗಳು. ಬಂಧಿತ ಮೂವರು ಯುವತಿಯರು ಕೆ.ಆರ್.ಆಸ್ಪತ್ರೆ ವೈದ್ಯ ಡಾ.ರಾಜೇಶ್ ಎಂಬವರಿಗೆ ಬೆದರಿಕೆ ಹಾಕಿ ಹಣ ಪೀಕಲು ವಿಫಲ ಯತ್ನ ನಡೆಸಿದ್ದರು ಎನ್ನಲಾಗಿದೆ. ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಯುವತಿಯರು  ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೀವು ರೋಗಿಗಳಿಂದ ಹಣ ಪಡೆದುಕೊಂಡಿದ್ದೀರಿ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ನಮ್ಮ ಬಳಿ ಇವೆ ಎಂದು ಬಂಧಿತ ಯುವತಿಯರು ವೈದ್ಯ ರಾಜೇಶ್ ರಿಗೆ ಹೆದರಿಸಿದ್ದರು. ಜತೆಗೆ ಪ್ರಕರಣ ಮುಚ್ಚಿಹಾಕಲು 5 ಲಕ್ಷ ರೂ.ಗಳಿಗೆ ಡಿಮಾಂಡ್ ಮಾಡಿದ್ದ ಯುವತಿಯರು 50 ಸಾವಿರ ರೂ. ಅಡ್ವಾನ್ಸ್ ಪಡೆದು ತೆರಳಿದ್ದರು. ಇನ್ನು ಹಣ ನೀಡುವಂತೆ ಒತ್ತಾಯಿಸಿ ಮಂಡಿ ಮೊಹಲ್ಲಾದ ಸಂಜೀವಿನಿ ಆಸ್ಪತ್ರೆ ಎದುರು ಗಲಾಟೆ ಮಾಡಿದ್ದು, ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೂವರು ಯುವತಿಯನ್ನರ ಬಂಧಿಸಲಾಗಿದೆ.arrest-three-young-women-name-media-human-rights-blackmail-mysore

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ, ಮೂವರು ಯುವತಿಯರು ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಸುವರ್ಣ ಕಾವೇರಿ ಎಕ್ಸ್‌ ಪ್ರೆಸ್  ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿ ಎಂದು ಆಯಿಷಾ ಬಾಯಿ, ಹಾಗೂ ಕ್ರೈಂ ವರದಿಗಾರ್ತಿ ಎಂದು ಅಮ್ರೀನ್ ಹೇಳಿದ್ದರು. ಆದರೇ ಮೈಸೂರಿನಲ್ಲಿ ಸುವರ್ಣ ಕಾವೇರಿ ಎಕ್ಸ್‌ ಪ್ರೆಸ್ ಎನ್ನುವ ಮಾಧ್ಯಮ ಸಂಸ್ಥೆಯೇ ಇಲ್ಲ. ಸಿಟಿಜನ್ ಲೇಬರ್ ವೆಲ್‌ ಫೇರ್ ಎನ್ನುವ ಸಾಂವಿಧಾನಿಕ ಸಂಸ್ಥೆಯೂ ಇಲ್ಲ. ಮೋಸ ಮಾಡುವ ಉದ್ದೇಶದಿಂದ ನಕಲಿ ಐಡಿ ಕಾರ್ಡ್‌ಗಳನ್ನ ಬಳಕೆ ಮಾಡಿರುವುದು ಸಾಬೀತಾಗಿದೆ ಎಂದು ವಿವರಿಸಿದರು.

ENGLISH SUMMARY….

Doctor blackmailed in the name of media, human rights: Three girls held
Mysuru, Jan. 21, 2021 (www.justkannada.in): Three girls who made a vain attempt to swindle money from a doctor in the name of media and human rights have come to light in Mysuru City and all three of them are now in police custody.arrest-three-young-women-name-media-human-rights-blackmail-mysore
The accused are identified as Amreen, Aisha Bai, and Shaheena Naveed. All the three girls had threatened a doctor named Dr. Rajesh, of K.R. Hospital, in Mysuru and tried to swindle money from him, using fake ID cards. These girls had threatened Dr. Rajesh stating that they have some video in which he was collecting money from a few patients and they would release it on social media if he would not give them Rs. 5 lakh. They also had collected Rs.50,000 it is learnt. Due to mounting pressure by the girls for more money Dr. Rajesh registered a complaint with the Mandi police, who investigated and took the girls into custody.
Keywords: Dr. Rajesh/ K.R. Hospital/ three girls/ swindle/ threatening/ money

Key words: Arrest – three young women – name – media -human rights- Blackmail-mysore

website developers in mysore