ಪೆನ್ ಡ್ರೈವ್ ಹಂಚಿಕೆ ಮಾಡಿದವರನ್ನೂ ಬಂಧಿಸಲಿ- ಆರ್.ಅಶೋಕ್ ಆಗ್ರಹ.

ಬೆಂಗಳೂರು ,ಮೇ,25,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪೆನ್ ಡ್ರೈವ್ ಹಂಚಿಕೆ ಮಾಡಿದವರು ಇಲ್ಲೇ ಓಡಾಡುತ್ತಿದ್ದಾರೆ. ಅವರನ್ನೂ ಬಂಧಿಸಲಿ ಎಂದು  ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಪೆನ್‌ ಡ್ರೈವ್‌ ಪ್ರಕರಣದಲ್ಲಿ ಸರ್ಕಾರದ ಪಿತೂರಿಯೂ ಇದೆ. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರವೇ ಹೊರಟಿದೆ. ಪೆನ್ ಡ್ರೈವ್ ಹಂಚಿಕೆ ಮಾಡಿದವರನ್ನೂ ಬಂಧಿಸಬೇಕು. ಹಾಸನದಲ್ಲಿ ಪೊಲೀಸರು ಏನು ಸತ್ತು ಹೋಗಿದ್ದಾರಾ?  ಇನ್ನೂ ಯಾಕೆ ಚಾಲಕ ಕಾರ್ತಿಕ್‌ ನನ್ನು ಬಂಧಿಸಿಲ್ಲ ಎಂದು  ವಾಗ್ದಾಳಿ ನಡೆಸಿದರು.

ಪ್ರಕರಣ ಸಂಬಂಧ ದೇವರಾಜೇಗೌಡ ಹಾಗೂ ಡಿ.ಕೆ. ಶಿವಕುಮಾರ್‌ ಆಡಿಯೋ ಸಂಬಂಧ ಇನ್ನೂ ಯಾಕೆ ತನಿಖೆ ಆಗುತ್ತಿಲ್ಲ. ಇದೊಂದು ರೀತಿ ಕುತಂತ್ರ ನಡೆಯುತ್ತಿದೆ ಎಂದು ಹರಿಹಾಯ್ದರು.

ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್,  ಮರಳಿ ಬರಲು ದೇವೇಗೌಡರು ಆಗ್ರಹಿಸಿದ್ದಾರೆ. ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಮಾಡಿದವರನ್ನೂ ಹುಡುಕಬೇಕು ಪ್ರಜ್ವಲ್ ಹೊರಗೆ ಹೋಗಲು  ಸರ್ಕಾರವೇ ಕಾರಣ ಎಂದು ಆರೋಪಿಸಿದರು.

Key words: Arrest – distributed -pen drive – R.Ashok