Friday, August 14, 2026

BDA Apartments

Home Cinema ಅಕ್ಟೋಬರ್ 28ಕ್ಕೆ ಅಪ್ಪು ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ರಿಲೀಸ್

ಅಕ್ಟೋಬರ್ 28ಕ್ಕೆ ಅಪ್ಪು ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ರಿಲೀಸ್

ಬೆಂಗಳೂರು, ಜುಲೈ 16, 2022 (www.justkannada.in): ಅಕ್ಟೋಬರ್ 28 ರಂದು ‘ಗಂಧದಗುಡಿ’ ಸಾಕ್ಷ್ಯ ಚಿತ್ರ ಬಿಡುಗಡೆಯಾಗಲಿದೆ. ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆಯ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಹಿತಿ ನೀಡಿದ್ದಾರೆ.

ಹೌದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ಆಗಿದದ್  ‘ಗಂಧದಗುಡಿ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ನಟ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆಗೆ ಒಂದು ದಿನ ಮೊದಲು ‘ಗಂಧದಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುತ್ತದೆ.

ಅಪ್ಪು ಡ್ರೀಮ್ ಪ್ರಾಜೆಕ್ಟ್ ಕುರಿತು ಅಶ್ವಿನಿ ವಿಶೇಷ ಪತ್ರವೊಂದನ್ನು ಕೂಡ ಬರೆದಿದ್ದಾರೆ. ಸಾಕ್ಷ್ಯಚಿತ್ರದ ಬಗ್ಗೆ ಪುನೀತ್ ಅವರಿಗಿದ್ದ ಕನಸಿನ ಬಗ್ಗೆ ಪತ್ರವನ್ನು  ಸಾಕಷ್ಟು ಹೇಳಿಕೊಂಡಿದ್ದಾರೆ.