Sunday, September 20, 2026

BDA Apartments

ಹೈಕೋರ್ಟ್ ಗೆ ಹೆಚ್ಚುವರಿ ಜಡ್ಜ್ ಗಳ ನೇಮಕ BDA JK_Adv BDA Adv
Home Front Page  ಹೈಕೋರ್ಟ್ ಗೆ ಹೆಚ್ಚುವರಿ ಜಡ್ಜ್ ಗಳ ನೇಮಕ.

 ಹೈಕೋರ್ಟ್ ಗೆ ಹೆಚ್ಚುವರಿ ಜಡ್ಜ್ ಗಳ ನೇಮಕ.

ಬೆಂಗಳೂರು,ನವೆಂಬರ್, 3,2021(www.justkannada.in):  ಕರ್ನಾಟಕ ರಾಜ್ಯ ಹೈಕೋರ್ಟ್ ಗೆ ಮೂವರು ಹೆಚ್ಚುವರಿ ಜಡ್ಜಗಳ ನೇಮಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಅನಂತ ರಾಮನಾಥ ಹೆಗ್ಡೆ, ಸಿದ್ಧಯ್ಯ ರಾಚಯ್ಯ, ಕೆ.ಎಸ್ ಹೇಳಲೇಖ ಅವರನ್ನ ಹೈಕೋರ್ಟ್ ಗೆ ಹೆಚ್ಚುವರಿ ಜಡ್ಜಗಳಾಗಿ ನೇಮಕ ಮಾಡಲು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೂವರು ಹೈಕೋರ್ಟ್ ನಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು.

ಮೂವರನ್ನ ಹೆಚ್ಚುವರಿ  ಜಡ್ಜ್ ಗಳಾಗಿ ನೇಮಿಸಲು ಸುಪ್ರೀಂಕೋರ್ಟ್ ಕೊಲೀಜಿಯಂ ಶಿಫಾರಸ್ಸು ಮಾಡಿತ್ತು. ಇದೀಗ ಮೂವರನ್ನ ಜಡ್ಜ್ ಗಳಾಗಿ ನೇಮಿಸಲು ರಾಷ್ಟ್ರಪತಿ ಒಪ್ಪಿಗೆ ನೀಡಿದ್ದಾರೆ.

Key words: Appointment – Additional -Judges –karnataka- High Court.