ದಲಿತ ಎಂಬ ಪದವನ್ನೇ ಬಳಸಿಲ್ಲ: ಬಿಜೆಪಿಯಿಂದ ರಾಜಕೀಯಕ್ಕಾಗಿ ಪ್ರತಿಭಟನೆ- ಸಿದ್ಧರಾಮಯ್ಯ ಸ್ಪಷ್ಟನೆ.

ಬೆಂಗಳೂರು,ನವೆಂಬರ್,3,2021(www.justkannada.in):  ದಲಿತ ನಾಯಕರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಇಂದು ಪ್ರತಿಭಟನೆ ನಡೆಸಿತು. ಆದರೆ ತಾವು ಹೇಳಿಕೆ ನೀಡಿರುವ ಕುರಿತು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನಾನು ಸಿಂದಗಿಯ ಎಡಗೈ ಸಮಾವೇಶದಲ್ಲಿ ಮಾತನಾಡಿದ್ದೆ. ಆಗ ನಾನು ದಲಿತ ಎಂಬ ಪದವನ್ನೇ ಬಳಕೆ ಮಾಡಿಲ್ಲ. ನಾನು ಕಾರಜೋಳ, ಜಿಗಜಿಣಗಿ ಬಗ್ಗೆ ಮಾತನಾಡಿದ್ದೆ. ಇವರು ಅಂಬೇಡ್ಕರ್‌ಗೆ ಗೌರವ ಕೊಡದ ಪಕ್ಷ ಸೇರಿದ್ದಾರೆ. ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದು ನಾನು ಹೇಳಿದ್ದೆ. ಅದಕ್ಕೆ ಬಿಜೆಪಿ ಬಣ್ಣ ಕಟ್ಟಿ ಪ್ರತಿಭಟನೆ ಮಾಡುತ್ತಿದೆ. ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಪ್ರಕಾರ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧ  ಇರುವವರು. ನಾವು ಡಾ.ಬಿ.ಆರ್ ಅಂಬೇಡ್ಕರ್‌ ಅವರ ಸಂವಿಧಾನದ ಪರವಾಗಿ ಇರುವವರು. ನಾನು ದಲಿತರ ಬಗ್ಗೆ ಮಾತಾಡಿದ್ದು ತಪ್ಪಿದ್ದರೆ ವಿರೋಧಿಸ್ತಿದ್ರು. ಸಮಾವೇಶ ಸ್ಥಳದಲ್ಲಿಯೇ ದಲಿತರು ವಿರೋಧ ಮಾಡುತ್ತಿದ್ದರು. ಈಗ ಬಿಜೆಪಿಯವರು ಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಎಂದೂ ದಲಿತರ ಪರವಾಗಿ ಇರುವವನು ಎಂದು ಸಿದ್ಧರಾಮಯ್ಯ ತಿಳಿಸಿದರು.

Key words:  word -Dalit – not used-former cm- Siddaramaiah -clarifies -protest – BJP