ಮೈಸೂರು ವಿವಿಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಭರ್ತಿಯಾಗದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.

ಮೈಸೂರು,ಫೆಬ್ರವರಿ,1,2022(www.justkannada.in): ಮೈಸೂರು ವಿಶ್ವ ವಿದ್ಯಾನಿಲಯವು 2021–22ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ ಭರ್ತಿಯಾಗದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಕುಲಪತಿಗಳ ಅನುಮೋದನೆ ಮೇರೆಗೆ 2021-22ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡಲಾಗಿದ್ದು, ಭರ್ತಿಯಾಗದ ಸೀಟುಗಳಿಗೆ ಭರ್ತಿ ಮಾಡಲು ತೀರ್ಮಾನಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಕೆಳಕಂಡ ಕ್ರಮಗಳನ್ನು ವಹಿಸುವಂತೆ ತಿಳಿಸಿದೆ.

  1. Admission portals ನಲ್ಲಿ Register ಆಗದೆ ಅಥವಾ Register ಆಗಿ ಪ್ರವೇಶ ಪರೀಕ್ಷೆ ಬರೆದು Admission Application ಹಾಕದೆ ಇರುವಂತಹ ವಿದ್ಯಾರ್ಥಿಗಳು ದಿನಾಂಕ: 03-02-2022 ರಿಂದ 06-02-2022 ಸಂಜೆ 5:00 PM ರೊಳಗೆ Admission portal ನಲ್ಲಿ Register ಆಗಿ ಬಯಸಿದ ಕೋರ್ಸ್‌ಗೆ ಅರ್ಜಿ ಸಲ್ಲಿಸುವುದು.
  2. ಈಗಾಗಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವ ಕೋರ್ಸ್‌ಗಳಿಗೆ ಅವರ ಹೆಸರುಗಳನ್ನು ಮತ್ತೆ ಪರಿಗಣಿಸಲಾಗುವುದು, ಮತ್ತೆ ಅರ್ಜಿ ಹಾಕುವ ಅವಶ್ಯಕತೆಯಿರುವುದಿಲ್ಲ.
  3. ಹೊಸದಾಗಿ Register ಆಗಿ ಅರ್ಜಿ ಸಲ್ಲಿಸುವವರು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಬೇರೆ ಕೋರ್ಸ್‌ಗಳಿಗೆ ಪ್ರವೇಶ ಬಯಸಿದಲ್ಲಿ (ಅರ್ಹತೆಯಿದ್ದಲ್ಲಿ ಮಾತ್ರ) ರೂ.1,000/-ಗಳನ್ನು (ಕೋರ್ಸ್ ಒಂದಕ್ಕೆ ಪಾವತಿಸಿ ಅರ್ಜಿಯನ್ನು Online ಮುಖಾಂತರ ಸಲ್ಲಿಸಬೇಕು. ಎಲ್ಲಾ ಪಾವತಿಗಳು online ಮುಖಾಂತರವೇ ನಡೆಸತಕ್ಕದ್ದು.

ಅಧ್ಯಯನ ವಿಭಾಗಗಳ ಪ್ರವೇಶಾತಿ ಸಮಿತಿ ಅಧ್ಯಕ್ಷರು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಪ್ರವೇಶಾತಿ ನೀಡುವುದು.

  1. Scheme-A” ಸೀಟುಗಳು ಖಾಲಿ ಉಳಿದು, Scheme-B’ ಸೀಟುಗಳನ್ನು operate ಮಾಡದಿದ್ದಲ್ಲಿ, Scheme-“A` ನಲ್ಲಿಯೇ ಭರ್ತಿ ಮಾಡಿ, ನಂತರ Scheme-B ಸೀಟುಗಳನ್ನು operate ಮಾಡುವುದು.
  2. Scheme-‘B’ ಸೀಟುಗಳು operate ಆಗಿ, ಒಂದು ವೇಳೆ Scheme-‘A’ ಸೀಟುಗಳು ಖಾಲಿ ಉಳಿದಿದ್ದಲ್ಲಿ, ಅವುಗಳನ್ನು Scheme-‘B’ಗೆ shift ಮಾಡಿ, Scheme’B’ ಆಡಿಯಲ್ಲಿಯೇ ಪ್ರವೇಶಾತಿ ನೀಡುವುದು.

ದಿನಾಂಕ 07-02-2022 ರಿಂದ 09-02-2022ರ ಸಾಯಂಕಾಲ 5-00 ಗಂಟೆಯೊಳಗೆ ಹೊಸದಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ (verification), ಬದಲಾವಣೆಗಳಿದ್ದಲ್ಲಿ Online ನಲ್ಲಿಯೇ ಆಳವಡಿಸುವುದು.

  1. ದಿನಾಂಕ 10-02-2022 ರಂದು ಬೆಳಗ್ಗೆ 10:00 ರಿಂದ 1:00 ಗಂಟೆಯವರೆಗೆ ವಿಭಾಗದಲ್ಲಿರುವ ರೆಜಿಸ್ಟರಿನಲ್ಲಿ ಸಹಿ ಮಾಡಿದ ವಿದ್ಯಾರ್ಥಿಗಳಿಗೆ Casual round ಮಾದರಿಯಲ್ಲಿ ದಿನಾಂಕ: 10-02-2022ರಂದು ಪ್ರವೇಶಾತಿಯನ್ನು ನಡೆಸಬೇಕು.
  2. ಸರ್ಕಾರಿ/ಖಾಸಗಿ/ಸಂಯೋಜಿತ ಸ್ವಾಯತ್ತ ಕಾಲೇಜುಗಳಿಗೆ ಮೆರಿಟ್ ಆಧಾರದ ಮೇಲೆ ವರ್ಗವಾರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪಾವತಿಸಬೇಕಾದ ಪ್ರವೇಶಾತಿ ಶುಲ್ಕವನ್ನು online ನಲ್ಲಿ ಪಾವತಿಸಿಕೊಂಡು ಪ್ರವೇಶಾತಿ ನೀಡುವುದು.

Key words: Application -admission – courses – Mysore university