Sunday, September 6, 2026

BDA Apartments

Home Front Page ಗುಣಮಟ್ಟದ ಅಕ್ಕಿ ಸಿಗುತ್ತೆ ಎಂದು ಎಫ್ ಸಿಐಗೆ ಮನವಿ: ಆದ್ರೆ ಕೇಂದ್ರದಿಂದ ದ್ವೇಷದ ರಾಜಕಾರಣ- ಸಚಿವ...

ಗುಣಮಟ್ಟದ ಅಕ್ಕಿ ಸಿಗುತ್ತೆ ಎಂದು ಎಫ್ ಸಿಐಗೆ ಮನವಿ: ಆದ್ರೆ ಕೇಂದ್ರದಿಂದ ದ್ವೇಷದ ರಾಜಕಾರಣ- ಸಚಿವ ಎಂ.ಸಿ ಸುಧಾಕರ್ ವಾಗ್ದಾಳಿ.

ಚಿಕ್ಕಮಗಳೂರು,ಜೂನ್,17,2023(www.justkannada.in): ಗುಣಮಟ್ಟದ ಅಕ್ಕಿ ಸಿಗುತ್ತದೆ ಎಂದು ಎಫ್ ಸಿಐಗೆ ಮನವಿ ಮಾಡುತ್ತಿದ್ದೇವೆ. ಆದರೆ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಎಂ.ಸಿ ಸುಧಾಕರ್, ನಾವೇನು ಪುಕ್ಸಟ್ಟೆ ಅಕ್ಕಿ ಕೊಡಿ ಎಂದು ಕೇಳ್ತಿಲ್ಲ. ಕೇಂದ್ರ  ಸರ್ಕಾರ ಪೂರೈಸುವ ಅಕ್ಕಿಗೆ ಹಣ ನೀಡಲು ನಾವು ಸಿದ್ಧರಿದ್ದೇವೆ.  ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅಕ್ಕಿ ಕೊಡುವುದಾಗಿ ಒಂದು ದಿನ ಹೇಳ್ತಾರೆ.  ಮಾರನೇ ದಿನ ಅಕ್ಕಿ ಕೊಡುವುದಿಲ್ಲ ಎನ್ನುತ್ತಾರೆ. ಇದು ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಎಂದು ಟೀಕಿಸಿದರು.

ಗುಣಮಟ್ಟದ ಅಕ್ಕಿ ಸಿಗುತ್ತೆ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿದರೇ ಗುಣಮಟ್ಟದ ಕೊರತೆ ಇರುತ್ತದೆ.  ರಾಜ್ಯದ ಜನರಿಗೆ ನಮ್ಮ ಸರ್ಕಾರ’ ಕೊಟ್ಟ ಮಾತಿನಂತೆ ಅಕ್ಕಿ ಕೊಡುತ್ತದೆ . ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಿ  ಪೂರೈಸಲು ಕ್ರಮ ಕೈಗೊಳ್ಳುತ್ತದೆ ಎಂದು ಎಂಸಿ ಸುಧಾಕರ್ ತಿಳಿಸಿದರು.

Key words: Appeal – FCI – quality –rice-Politics – center – Minister- MC Sudhakar