ಮೈಸೂರು,ಜುಲೈ,23,2026 (www.justkannada.in): ಯೂಟ್ಯೂಬ್ ಚಾನೆಲ್ ಗಳು ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಪ್ರಸಾರ ಮಾಡುವ ಮಾಧ್ಯಮ ಪ್ರತಿನಿಧಿಗಳಿಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಇಂದು (ಜುಲೈ 23) ಸಂಜೆ 5 ಗಂಟೆಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಈ ತರಬೇತಿ ನಡೆಯಲಿದೆ.
ಡಿಜಿಟಲ್ ಮಾಧ್ಯಮಗಳ ಮೂಲಕ ಸುದ್ದಿ ಪ್ರಸಾರ ಮಾಡುವ ಸಂದರ್ಭದಲ್ಲಿ ಪಾಲಿಸಬೇಕಾದ ಕಾನೂನು ನಿಯಮಗಳು, ಸಾಮಾಜಿಕ ಜವಾಬ್ದಾರಿ, ನಿಖರ ಮಾಹಿತಿ ಪರಿಶೀಲನೆ, ಸೈಬರ್ ಕಾನೂನುಗಳು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಹಲವು ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಲಾಗುವ ಸಾಧ್ಯತೆಯಿದೆ.
ಯೂಟ್ಯೂಬ್ ಚಾನೆಲ್ ಗಳಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಪ್ರಕಟಿಸುವವರು ಕಡ್ಡಾಯವಾಗಿ ಈ ತರಬೇತಿಯಲ್ಲಿ ಭಾಗವಹಿಸುವಂತೆ ಮೈಸೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ.
ENGLISH SUMMARY..
YouTube & Social Media Journalists Training Today
Mysuru: Mysuru City Police have organized a training session for media representatives working on YouTube channels and other social media platforms.
The program will be held today at 5:00 PM at the Conference Hall, Mysuru City Police Commissioner’s Office.
All YouTube channel journalists and digital media representatives are requested to attend the training session.
Key words: Mysore, YouTube, Social Media, Journalists, Training, Today






