ಬರ ಮತ್ತು ಮಳೆಹಾನಿ ಪರಿಹಾರ ಮೊತ್ತ ಹೆಚ್ಚಳ ಮಾಡಲು ಕೇಂದ್ರಕ್ಕೆ ಮನವಿ- ಕಂದಾಯ ಸಚಿವ ಕೃಷ್ಣಭೈರೇಗೌಡ.

ನವದೆಹಲಿ,ಜೂನ್,13,2023(www.justkannada.in):  ಬರ ಮತ್ತು ಮಳೆಹಾನಿ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ  ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ  ತಿಳಿಸಿದ್ದಾರೆ.

ಬಿಪೊರ್ ಜಾಯ್ ಚಂಡಮಾರುತ ಹಿನ್ನೆಲೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇಂದು ವಿಪತ್ತು ನಿರ್ವಹಣಾ ಕುರಿತು ಸಭೆ ನಡೆಸಿದರು ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಬೆಳೆಹಾನಿ, ಮಳೆ ಆಶ್ರಿತ ಭೂಮಿಯಲ್ಲಿ ಬೆಳೆಹಾನಿ, ನೀರಾವರಿ ಭೂಮಿ ತೋಟಗಾರಿಕೆ ಬೆಳೆಹಾನಿಗೆ ನೀಡುತ್ತಿರುವ ಪರಿಹಾರವನ್ನು ಹೆಚ್ಚಿವುಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸಭೆಯಲ್ಲಿ ಕರ್ನಾಟಕದ ಪರವಾಗಿ ಮೂರು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದವು. ಮಳೆ ಹಾನಿ, ಬೆಳೆ ಪರಿಹಾರ ಮೊತ್ತವೂ ಕಡಿಮೆ ಇದೆ. ರಾಜ್ಯ ಸರ್ಕಾರ ಕೈಯಿಂದ ಹಣ ಹಾಕುತ್ತಿದೆ, ಇದು ಹೊರೆಯಾಗುತ್ತಿದೆ. ಹೀಗಾಗಿ ಬರ ಮತ್ತು ಮಳೆಹಾನಿ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದೇನೆ. ಕರ್ನಾಟಕದ ಎಸ್‌ಡಿಆರ್‌ಎಫ್​​ಗೆ ಈಗಾಗಲೇ ಅನುದಾನ ಕಡಿಮೆ ಬರುತ್ತಿದೆ. ಈ ಹಿನ್ನೆಲೆ ಪರಿಷ್ಕರಣೆಯಾಗಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಹೇಳಿದರು.

ಬೆಳೆಹಾನಿಯಾದರೆ 1 ಹೆಕ್ಟೇರ್​​ಗೆ ಮಳೆ ಆಶ್ರಿತ ಭೂಮಿಗೆ 8,500 ರೂ., ಮಳೆ ಆಶ್ರಿತ ಭೂಮಿಯಲ್ಲಿ ಬೆಳೆಹಾನಿದರೆ 20 ಸಾವಿರ ರೂ. ಪರಿಹಾರಕ್ಕೆ ಮನವಿ ಮಾಡಲಾಗಿದೆ. ಅದೇ ರೀತಿ ನೀರಾವರಿ ಭೂಮಿ 17 ಸಾವಿರದಿಂದ 35,000 ರೂ.ಗೆ, ತೋಟಗಾರಿಕೆ ಬೆಳೆಹಾನಿಗೆ 22 ಸಾವಿರದಿಂದ 49,000 ರೂ.ಗೆ ಹೆಚ್ಚಿಸಲು ಮನವಿ ಮಾಡಲಾಗಿದೆ. ಇದೇ ವೇಳೆ ರಾಡಾರ್ ಅಳವಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Key words: Appeal – center – increase -drought – rain- damage- compensation –amount-Minister -Krishnabhairegowda.