ನಾನು ಯಾಕೆ ಸಿಎಂ ಆಗಬಾರದು..?  ನಮಗೆ ಅವಕಾಶಗಳನ್ನ ತಪ್ಪಿಸಿದ್ದಾರೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರೋಕ್ಷ ಅಸಮಾಧಾನ.

ಬೆಂಗಳೂರು,ಜೂನ್,13,2023(www.justkannada.in): ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮತ್ತೆ ತಮ್ಮ ಸಿಎಂ ಆಗುವ ಆಸೆ ಬಿಚ್ಚಿಟ್ಟಿದ್ದು ಈ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ದಲಿತ ಸಮುದಾಯದಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಅಭಿನಂದನಾ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್,   ನಾನು ಯಾಕೆ ಸಿಎಂ ಆಗಬಾರದು ನಾನು ಸಿಎಂ ಆಗಬೇಕು ಎಂದ ಹೇಳುತ್ತೇನೆ. ಮುನಿಯಪ್ಪ, ಹೆಚ್.ಸಿ ಮಹದೇವಪ್ಪ ಯಾಕೆ ಸಿಎಂ ಆಗಬಾರದು ನಮಗೆ ಸಿಎಂ ಆಗುವ ಅವಕಾಶಗಳನ್ನ ತಪ್ಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲಿ ಒಗ್ಗಟ್ಟು ಇದ್ದರೇ ಮಾತ್ರ ಉಳಿದುಕೊಳ್ಳುತ್ತವೆ. ಅದನ್ನು ಬಿಟ್ಟು ಎಡಗೈ ಬಲಗೈ ಸಮುದಾಯ ಅಂತಿದ್ದರೇ ಉಳಿಯುವುದಿಲ್ಲ.  ನಮ್ಮಲ್ಲಿ ಒಗ್ಗಟ್ಟು ಇರಬೇಕು. ದಲಿತರನ್ನ ಕಡೆಗಣಿಸಿದ್ದಕ್ಕೆ  2018ರಲ್ಲಿ ಕಾಂಗ್ರೆಸ್ ಗೆ ಸೋಲಾಯಿತು. 2013ರಲ್ಲಿ ನಾನು  ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಆಗ ನನ್ನ ನೇತೃತ್ವದಲ್ಲಿ ಪಕ್ಷ  ಅಧಿಕಾರಕ್ಕೆ ಬಂತು. ಆದರೆ ಆದ್ರೆ ಪರಮೇಶ್ವರ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು ಅಂತಾ ಯಾರೂ ಹೇಳಲಿಲ್ಲ  ಎಂದು ಬೇಸರ ಹೊರ ಹಾಕಿದರು.

ಮುನಿಯಪ್ಪ ನೇತೃತ್ವದಲ್ಲಿ ಜಗಜೀವನ ರಾಮ್ ಜಯಂತಿ ನನ್ನ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ ಮಾಡಲು ಹೇಳಿದ್ರು.  ಅಲ್ಲೂ ನಮ್ಮನ್ನ ಒಡೆದು ಆಳೋಕೆ ನೋಡಿದರು ಎಂದು ಸ್ವಪಕ್ಷೀಯವರ ವಿರುದ್ದ ಪರೋಕ್ಷವಾಗಿ ಡಾ.ಜಿ.ಪರಮೇಶ್ವರ್ ಅಸಮಾಧಾನ ಹೊರಹಾಕಿದರು.

Key words: Why -can’t I –become- CM- Home Minister -Dr. G. Parameshwar