Sunday, August 23, 2026

BDA Apartments

Home Front Page ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ: ಮಹಿಳಾ ಆಯೋಗಕ್ಕೆ ದೂರು.

ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ: ಮಹಿಳಾ ಆಯೋಗಕ್ಕೆ ದೂರು.

ಬೆಂಗಳೂರು,ಫೆಬ್ರವರಿ,22,2024(www.justkannada.in): ಕಾಟೇರ ಚಿತ್ರದ ಟೈಟಲ್ ಕುರಿತು   ನಿರ್ಮಾಪಕ ಉಮಾಪತಿ ಗೌಡ  ನಟ ದರ್ಶನ್ ನಡುವೆ ವಾಕ್ಸಮರ ನಡೆದು ಈಗಾಗಲೇ ದರ್ಶನ್ ವಿರುದ್ಧ ಒಂದು ದೂರು ದಾಖಲಾಗಿದ್ದು,ಈ ಬೆನ್ನಲ್ಲೆ  ಇದೀಗ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮಂಡ್ಯದಲ್ಲಿ ನಡೆದ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಕುರಿತು ಅವಹೇಳನ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ  ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬೆಳ್ಳಿ ಪರ್ವದಲ್ಲಿ ನಟ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡುವಂತೆ ಮಾತನಾಡಿದ್ದಾರೆ ಎಂದು ಒಕ್ಕಲಿಗರ ಗೌಡತಿಯರ ಸಂಘಟನೆಯಿಂದ ಕಾವೇರಿ ಭವನದ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.  ಜಯಶ್ರೀ ಎನ್ನುವರು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು, ಇವತ್ತು ಅವಳು ಇರುತ್ತಾಳೆ ನಾಳೆ ಇವಳು ಬರುತ್ತಾಳೆ ಹೋಗ್ರಿ ನಿಮ್ಮಜ್ಜಿನ ಬಡಿಯ ಎಂದು ದರ್ಶನ್  ಹೇಳಿದ್ದರು. ಈ ಹೇಳಿಕೆ  ಖಂಡಿಸಿ ಒಕ್ಕಲಿಗರ ಗೌಡತಿಯರ ಸಂಘಟನೆಯಿಂದ ಇದೀಗ ದೂರು ದಾಖಲಾಗಿದೆ.

ನಟ ದರ್ಶನ್ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುತ್ತಿಲ್ಲ. ಕೂಡಲೇ ದರ್ಶನ್  ಕ್ಷಮೆಯಾಚಿಸಲಿ ಎಂದ   ಗೌಡತಿ ಸಂಘಟನೆ ಅಧ್ಯಕ್ಷ ರೇಣುಕಾ ಆಗ್ರಹಿಸಿದ್ದಾರೆ.

Key words: Another -trouble – actor -Darshan- Complaint – Women’s Commission.