Monday, September 21, 2026

BDA Apartments

ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಸೂರ್ಯನತ್ತ ಹಾರಿದ ಆದಿತ್ಯ L-1 BDA JK_Adv BDA Adv
Home Front Page ಇಸ್ರೋದಿಂದ ಮತ್ತೊಂದು  ಮೈಲಿಗಲ್ಲು: ಸೂರ್ಯನತ್ತ ಹಾರಿದ ಆದಿತ್ಯ L-1.

ಇಸ್ರೋದಿಂದ ಮತ್ತೊಂದು  ಮೈಲಿಗಲ್ಲು: ಸೂರ್ಯನತ್ತ ಹಾರಿದ ಆದಿತ್ಯ L-1.

ಆಂಧ್ರಪ್ರದೇಶ,ಸೆಪ್ಟಂಬರ್,1,2023(www.justkannada.in): ಚಂದ್ರಯಾನ-3 ಯಶಸ್ವಿ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ISRO)  ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್‌1 ಮಿಷನ್(Aditya L1 Mission) ಯಶಸ್ವಿಯಾಗಿ ಲಾಂಚ್ ಆಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್‌1 ನೌಕೆಯನ್ನ ಇಸ್ರೋ ಉಡಾವಣೆ ಮಾಡಿದ್ದು ಆದಿತ್ಯ ಎಲ್-1  ಹೊತ್ತು ಪಿಎಸ್ ಎಲ್ ವಿ C-57 ಸೂರ್ಯನತ್ತ ಹೊರಟಿದೆ.ಇಸ್ರೋದಿಂದ ಮತ್ತೊಂದು ಮೈಲಿಗಲ್ಲು isro

ಆದಿತ್ಯ ಎಲ್1 ನೌಕೆ, ಒಟ್ಟು 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಸೂರ್ಯಶೋಧಕ್ಕೆ  ಹೊರಟಿದೆ.  ಇದರಲ್ಲಿ ಮೂರು ಉಪಕರಣಗಳು ಸೂರ್ಯನನ್ನು ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡುತ್ತೆ. ಉಳಿದ ಮೂರು ಉಪಕರಣಗಳು, ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡುತ್ತೆ. ವಿಶೇಷ ಅಂದ್ರೆ ಆದಿತ್ಯ ಎಲ್‌1ನಲ್ಲಿರುವ ಉಪಕರಣಗಳು ಎಲ್‌1 ಪಾಯಿಂಟ್‌ನಲ್ಲೇ ಸುತ್ತುತ್ತಾ ಕೃತಕ ಗ್ರಹಣ ಕೂಡ ಸೃಷ್ಟಿಸಬಲ್ಲವು ಎನ್ನಲಾಗಿದೆ.

-V.Mahesh kumar

Key words: Another- milestone -ISRO: Aditya L-1 – launch