ಕರ್ನಾಟಕ ಎಸ್ಸಿ , ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ.

0
2

ಬೆಂಗಳೂರು,ಮೇ,9,2022(www.justkannada.in): ಕರ್ನಾಟಕ ಎಸ್ಸಿ/ ಎಸ್ಟಿ ಪತ್ರಿಕಾ( ಸರ್ಕಾರದ ಮಾನ್ಯತೆ ಪಡೆದ)  ಸಂಪಾದಕರ  ಸಂಘದ 2021-22 ನೇ ಸಾಲಿನ  ‘ ಬಿ.ರಾಚಯ್ಯ ದತ್ತಿನಿಧಿವಾರ್ಷಿಕ ಪ್ರಶಸ್ತಿ’ ಗೆ  ಪತ್ರಕರ್ತರೂ ಆಗಿದ್ದ ಸಾಮಾಜಿಕ ಮತ್ತು ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಆಯ್ಕೆ ಮಾಡಿದೆ.

ಸುದ್ದಿ ಮಾಧ್ಯಮ‌ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರು ಹಿರಿಯ ಸಂಪಾದಕರಿಗೆ ನೀಡಲಾಗುವ  “ವಾರ್ಷಿಕ ಪ್ರಶಸ್ತಿ” ಗಳಿಗೆ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಸ್ಥಾಪಕ ಸದಸ್ಯರೂ, ಮೈಸೂರಿನ ನಿಜದನಿ   ಪತ್ರಿಕೆ ಸಂಪಾದಕ ಶಾಂತರಾಜ್  ಬಾಗಲಕೋಟೆಯ  ಮಲಪ್ರಭ ಎಕ್ಸ್ ಪ್ರೆಸ್ ಪತ್ರಿಕೆ ಸಂಪಾದಕ ಮುತ್ತು ನಾಯ್ಕರ್ ಮತ್ತು ಕಲ್ಬುರ್ಗಿಯ ಕರ್ನಾಟಕ ಸಂಧ್ಯಾಕಾಲ ಪತ್ರಿಕೆ ಸಂಪಾದಕರಾದ ಡಿ. ಶಿವಲಿಂಗಪ್ಪ ಅವರನ್ನು  ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ನಗದು ಮತ್ತು ಫಲಕಗಳನ್ನು ಹೊಂದಿದೆ.

ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ಅವರು ಹಿರಿಯ ಮುತ್ಸದ್ದಿ ರಾಜಕಾರಣಿ ಬಿ.ರಾಚಯ್ಯ ಅವರ ಹೆಸರಿನಲ್ಲಿ ಸಂಘದಲ್ಲಿ ಸ್ಥಾಪಿಸಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಯನ್ನು ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತ,ದಮನಿತರ ಪರವಾಗಿ  ವೃತ್ತಿಪರತೆಯಿಂದ ದುಡಿದ ಸಾರ್ವತ್ರಿಕವಾಗಿ ಹಿರಿಯ ಪತ್ರಕರ್ತರೊಬ್ಬರನ್ನು ಗುರುತಿಸಿ  ಪ್ರತಿವರ್ಷ  ನೀಡಲಾಗುತ್ತಿದೆ.

ಅದೇ ರೀತಿಯ ಪ್ರತಿವರ್ಷ ಸಂಘದ  ಮೂವರು ಹಿರಿಯ ಸಂಪಾದಕರನ್ನು ಸಂಘದ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ಮೇ.13 ರಂದು ಗಾಂಧಿಭವನ, ಕುಮಾರಕೃಪ ರಸ್ತೆ ಬೆಂಗಳೂರು ಇಲ್ಲಿ  ಪ್ರಶಸ್ತಿ  ಪ್ರದಾನ ಸಮಾರಂಭ  ನಡೆಯಲಿದೆ.

Key words: Annual award- publication –Karnataka- SC & ST Press -Editors- Association.