ಜೆಡಿಎಸ್ ಅಧಿಕಾರಕ್ಕೆ ತಂದು ಉಸಿರು ಬಿಡಬೇಕೆಂಬುದು ನನ್ನ ಹಠ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ಚಿಕ್ಕಮಗಳೂರು,ಮೇ,9,2022(www.justkannada.in): ಜೆಡಿಎಸ್ ಅಧಿಕಾರಕ್ಕೆ ತಂದು ಉಸಿರು ಬಿಡಬೇಕೆಂಬುದು ನನ್ನ ಹಠವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗಗೌಡರು, ದೇವೇಗೌಡರಿಗೆ 90 ವರ್ಷ ವಯಸ್ಸಾಗಿದೆ ಅಂತಾರೆ.  ಆದರೆ ನನಗೆ ಇನ್ನೂ 90 ವರ್ಷ ಮುಟ್ಟೇ ಇಲ್ಲ . ನನ್ನ ಜೀವನದ ಕೊನೆಉಯ ಆಸೆ ಏನು ಗೊತ್ತಾ..? ಪ್ರಾದೇಶಿಕ ಪಕ್ಷ ಉಳಿಸಿ ಅಧಿಕಾರಕ್ಕೆ ತರಬೇಕು. ಜೆಡಿಎಸ್ ಅಧೀಕಾರಕ್ಕೆ ತಂದು ಉಸಿರು ಬಿಡಬೇಕೆಂಬ ಹಠವಿದೆ ಎಂದರು.

ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.  ಪಕ್ಷ ಉಳಿಸಲು ನಾವು ಹೇಗೆ ನಡೆದುಕೊಳ್ಳಬೇಕು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ತರಬೇಕೆಂಬುದೇ ನನ್ನ  ಆಸೆ  ಎಂದು ಹೆಚ್.ಡಿ ದೇವೇಗೌಡ ತಿಳಿಸಿದ್ದಾರೆ.

Key words: JDS –power-Former Prime Minister -HD Deve Gowda.