ಸಿಎಂ ಕುರ್ಚಿಗೆ 2500 ಕೋಟಿ ಆರೋಪ ಮಾಡಿದ ಶಾಸಕ ಯತ್ನಾಳ್ ಗೆ ಸಚಿವ ಬಿಸಿ ಪಾಟೀಲ್ ಟಾಂಗ್.

ಬೆಂಗಳೂರು,ಮೇ,9,2022(www.justkannada.in): ನಿಮ್ಮನ್ನು ಸಿಎಂ ಮಾಡುತ್ತೇವೆ 2500 ಕೋಟಿ ನೀಡಿ ಎಂದು ದೆಹಲಿಯಿಂದ ಬಂದು ಕೇಳಿದ್ದರು ಎಂದು ಆರೋಪ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕೃಷಿ ಸಚಿವ ಬಿಸಿ ಪಾಟೀಲ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕೆಲವರು ಸುದ್ದಿಯಲ್ಲಿ ಇರಬೇಕು ಎಂದು ಹೇಳಿಕೆ ನೀಡುತ್ತಾರೆ. ಯತ್ನಾಳ್ ಬಗ್ಗೆ ಕ್ರಮ ಕೈಗೊಳ್ಳಲು ನಮ್ಮ ಪಕ್ಷ ಇದೆ. ಯತ್ನಾಳ್ ಆರೋಪ ಮಾಡಿದರೆ ದಾಖಲೆ ನೀಡಲಿ. ಇಷ್ಟೂ ದಿನ ಸುಮ್ಮನಿದ್ದು  ಈಗೆ ಯಾಕೆ  ಆರೋಪ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯಾಗಲಿ ಯತ್ನಾಳ್ ಆಗಲಿ ಯಾರೇ ಆರೋಪ ಮಾಡಿದರೂ ಆರೋಪ ಸಂಬಂಧ ದಾಖಲೆಗಳನ್ನ ನೀಡಲಿ ಎಂದರು.

Key words: Minister -BCPatti T-ong to – MLA –Yatnal