ಅಮೃತ ಸಿಂಚನ : “ನಗದಿದ್ದರೆ ನಷ್ಟ ಯಾರಿಗೆ?”

ಅಮೃತ ಸಿಂಚನ : “ನಗದಿದ್ದರೆ ನಷ್ಟ ಯಾರಿಗೆ?”

ಮೈಸೂರು,ಜನವರಿ,30,2021(www.justkannada.in): “ನಗದಿದ್ದರೆ ನಷ್ಟ ಯಾರಿಗೆ?” ಎಂಬುದು ನನ್ನ 21ನೆಯ ಪುಸ್ತಕ. ಇದೀಗ ಪ್ರಕಟಣೆಯ ಭಾಗ್ಯ ಕಂಡಿದೆ. ಇದು ನನ್ನ ಎರಡನೆಯ ಹಾಸ್ಯ ಲೇಖನಗಳ ಸಂಗ್ರಹ (ಮೊದಲನೆಯದು “ಶೃಂಗೇರಿ ಉಪಚಾರ”) 1/8 ಡೆಮಿ ಆಕಾರದ 146 ಪುಟಗಳ ಈ ಸಂಗ್ರಹದಲ್ಲಿ 33 ಹಾಸ್ಯ ಲೇಖನಗಳಿವೆ. ಪ್ರತಿಯೊಂದು ಲೇಖನಕ್ಕೂ ಒಂದೊಂದು ವ್ಯಂಗ್ಯಚಿತ್ರದ ಅಲಂಕಾರ ಮಾಡಿದ್ದೇನೆ.

ಬೆಂಗಳೂರಿನ “ನ್ಯೂ ವೇವ್ ಬುಕ್ಸ್” ಇದರ ಪ್ರಕಾಶಕರು. ಬೆಲೆ 120 ರೂಪಾಯಿ ಇಟ್ಟಿದ್ದಾರೆ. ಇದನ್ನು ಓದಿ ನಕ್ಕೂ ನಕ್ಕು ಸುಸ್ತಾಗಿ ಬಿದ್ದುಹೋದರೆ ನನ್ನನ್ನು ದೂರಬೇಡಿ. ನಗುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಂದರೆ, ನಕ್ಕೂ ನಕ್ಕು ಬಿದ್ದರೂ ಲಾಭವೇ! ಹಾಗಾಗಿ ನೀವು ನಕ್ಕು ಬಿದ್ದುಹೋದರೆ ನಷ್ಟವೇನೂ ಇಲ್ಲ ಬಿಡಿ. ಚೇತರಿಸಿಕೊಂಡು ಬೇಗ ಏಳುತ್ತೀರಿ!

– ಜಿ. ವಿ. ಗಣೇಶಯ್ಯ.

cash-loss-to-whom-g-v-ganeshaiah