ಅಮೃತ ಸಿಂಚನ: ಕ್ಯೂನಲ್ಲಿ ಕಾಯುವುದು ಎಂದರೆ ಹುಡುಗಾಟವಲ್ಲ ಕಂಡ್ರೀ!

ಅಮೃತ ಸಿಂಚನ: ಕ್ಯೂನಲ್ಲಿ ಕಾಯುವುದು ಎಂದರೆ ಹುಡುಗಾಟವಲ್ಲ ಕಂಡ್ರೀ!

ಮೈಸೂರು,ಮಾರ್ಚ್ಮ22,2021(www.justkannada.in):  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೋನಾ ಪೀಡಿತರಾಗಿ ನಾನು, ನನ್ನ ಹೆಂಡತಿ ದಾಖಲಾಗಿದ್ದ ಸಂದರ್ಭ.jk

ಇಬ್ಬರಿಗೂ ಚಿಕಿತ್ಸೆ ನಡೆಯುತ್ತಿತ್ತು. ದಿನಬೆಳಗಾದರೆ ಕರೋನಾ ಪಡಿತರ ಪೈಕಿ ಒಬ್ಬೊಬ್ಬರೇ ಸಾವನ್ನಪ್ಪುತ್ತಿದ್ದುದು ನನ್ನ ಆತಂಕಕ್ಕೆ ಕಾರಣವಾಗಿತ್ತು. ಟಿವಿಯಲ್ಲಿ ಬೇರೆ ಕರೋನಾ ದೃಶ್ಯಗಳನ್ನು ನೋಡಿ ನೋಡಿ ಬೆಚ್ಚಿದ್ದೆ. ಅಮೆರಿಕ, ಇಟಲಿ, ಇಂಗ್ಲೆಂಡ್ ನಂತಹ ಮುಂದುವರಿದ (?) ದೇಶಗಳಲ್ಲೇ ಸಾಲು-ಸಾಲು ಕೊರೋನಾ ಸಾವುಗಳನ್ನು ಗಮನಿಸಿದ್ದೆ. ನಮ್ಮಲ್ಲೂ ಅನೇಕ ಸಾವುಗಳನ್ನು ಟಿವಿ ಮಾಧ್ಯಮದವರು ತೋರಿಸಿ ಹೆದರಿಸಿದ್ದರು!

ಇಲ್ಲಿ ಒಂದು ಸಮಾಧಾನದ ಸಂಗತಿಯೆಂದರೆ, ಸತ್ತವನ ಹೆಣವನ್ನು ವಾರಸುದಾರರಿಗೆ ಹಸ್ತಾಂತರಿಸುತ್ತಿರಲಿಲ್ಲ. ಆಸ್ಪತ್ರೆಯವರೇ ಅದಕ್ಕೊಂದು ಗತಿ ಕಾಣಿಸಿಬಿಡುತ್ತಿದ್ದರು. ಹಾಗಾಗಿ, ಆ ಹೆಣದ ವಾರಸುದಾರರಿಗೆ ಅದನ್ನು ಸ್ಮಶಾನಕ್ಕೊಯ್ದು ಸುಡುವ/ಹೂಳುವ ಕೆಲಸ ಕೂಡ ಇರುತ್ತಿರಲಿಲ್ಲ.

ಅಕ್ಕಪಕ್ಕದ ಕೊರೋನಾ ರೋಗಿಗಳು ಒಬ್ಬೊಬ್ಬರಾಗಿ ಸಾಯುತ್ತಿದ್ದರೆ ನಮಗೆ ಸುಮ್ಮನಿರಲಾಗುತ್ತಿರಲಿಲ್ಲ. ನಮ್ಮ ಸರದಿಗಾಗಿ ಕಾಯುವಂತಹ ಸ್ಥಿತಿ ಇದ್ದಿತು. ಆದರೂ ಕೆಲವರು ಕೊರೊನಾದಿಂದ ಬಿಡುಗಡೆಗೊಂಡು ಮನೆಗೆ ಮರಳುತ್ತಿದ್ದುದು ನಮ್ಮಲ್ಲಿ ಬದುಕಬಹುದಾದ ದೂರದ ಆಸೆಯನ್ನು ಚಿಗುರಿಸಿದ್ದಿತು. ಆದರೆ, ನನ್ನ ಹೆಂಡತಿಗೆ ಅಸ್ತಮ ಇದ್ದಿತು. ಅಸ್ತಮ ಇದ್ದವರಿಗೆ ಕೊರೋನ ಬಂದರೆ ಬದುಕುವುದು ಕಷ್ಟ ವಂತೆ. ಹಾಗಾಗಿ ನನ್ನ ಹೆಂಡತಿಯ ಮನಸ್ಸಿನಲ್ಲಿ “ನಾನು ಮಕ್ಕಳು ಮರಿಗಳ ಮುಖ ನೋಡುತ್ತೇನೋ ಇಲ್ಲವೋ, ಇಲ್ಲಿಂದ ನೇರ ಸ್ಮಶಾನಕ್ಕೇ ಹೋಗುತ್ತೇನೇನೋ. ನನ್ನ ಹೆಣವನ್ನು ಸಹ ಮಕ್ಕಳಿಗೆ ಕೊಡುವುದಿಲ್ಲ” ಎಂಬಂತಹ ಭಯ ಆಯಕೆಯ ಮನವನ್ನಾವರಿಸಿತ್ತಂತೆ!amrita-sinchana-queue-means-no-search

ಆದರೆ ಒಂದು ಅವ್ಯಕ್ತ ಭಯವಂತೂ ಇತ್ತು: ರಾತ್ರಿ ನಿದ್ದೆ ಮಾಡುತ್ತಿದ್ದಾಗ ಅಕಸ್ಮಾತ್ ನಿದ್ದೆಯಲ್ಲೇ ಪ್ರಾಣ ಹೋಗಿ ಬೆಳಿಗ್ಗೆ ಕಣ್ಣು ಬಿಡದ ಹಾಗಾಗಿ ಬಿಟ್ಟರೆ? ಇದರ ನಡುವೆ, ನಾನು ಮೊದಲು ಸಾಯುತ್ತೇನೋ, ನನ್ನ ಹೆಂಡತಿ ಮೊದಲು ಸಾಯುತ್ತಾಳೋ, ಅಥವಾ ಇಬ್ಬರೂ ಒಟ್ಟಿಗೆ ಏಕಕಾಲದಲ್ಲಿ ಸಾಯುತ್ತೇವೋ- ಎಂಬ ಕುತೂಹಲ ಬೇರೆ.

ನಮಗೆ ಸ್ಟಾರ್ ಹೋಟೆಲಿನಿಂದ ಊಟ-ತಿಂಡಿ ಬರುತ್ತಿತ್ತು. ಆ ಆಹಾರ ಪದಾರ್ಥಗಳು ತುಂಬಾ ಚೆನ್ನಾಗಿರುತ್ತಿದ್ದವು. 400 – 500 ರೂ ಬೆಲೆ ಇರಬಹುದಾದ ಇಂತಹ ದುಬಾರಿ ಊಟವನ್ನು ನಮಗೇಕೆ ಒದಗಿಸುತ್ತಿದ್ದಾರೆ ಎಂಬುದು ಅರ್ಥವಾಗಿರಲಿಲ್ಲ. ಹಾಗೆಯೇ ಒಂದು ದಿನ ಯೋಚಿಸುತ್ತಿದ್ದಾಗ ನನಗೆ ಹೊಳೆದುದು ಇಷ್ಟು: “ಹೇಗೂ ಸಾಯುತ್ತವೆ ಮುಂಡೆವು, ಒಂದಿಷ್ಟು ಒಳ್ಳೆಯ ಊಟವನ್ನಾದರೂ ತಿಂದು ಸಾಯಲಿ ಪಾಪ” ಅನ್ನುವ ಕಾರಣ ಇರಬಹುದೇನೋ!

ಬೇರೆಯವರ ಸಾವನ್ನು ನೋಡಿ ನಮ್ಮ ಸರದಿಗಾಗಿ ಕಾದಿದ್ದೊಂದೇ ಬಂತು. ನಾವು ಸಾಯದೆ ಮನೆಗೆ ಮರಳಿದೆವು. “ಗಾಡ್ ಇಸ್ ಗ್ರೇಟ್” ಅಂತೀರಾ?

ಜಿ. ವಿ. ಗಣೇಶಯ್ಯ.

 

key words: Amrita sinchana- queue- means- no search