ಅಮೃತ ಸಿಂಚನ – 10 : ನಾಲಗೆ ಮತ್ತು ದೇಹ

Promotion

ಅಮೃತ ಸಿಂಚನ – 10

ನಾಲಗೆ ಮತ್ತು ದೇಹ

ಸಾಮಾನ್ಯವಾಗಿ ಹೀಗಾಗುವುದೇ ಹೆಚ್ಚು. ನಾಲಗೆ ಬಯಸುವುದು ಹೆಚ್ಚಿನ ವೇಳೆ ದೇಹಕ್ಕೆ ತೊಂದರೆ ಕೊಡುವಂತಹ ಆಹಾರ ಪದಾರ್ಥಗಳನ್ನೇ. ಶರೀರಕ್ಕೆ ಬೇಕಾಗುವುದನ್ನು ನಾಲಗೆ ಸಾಮಾನ್ಯವಾಗಿ ಇಷ್ಟಪಡುವುದಿಲ್ಲ.

ನಾವೂ ಅಷ್ಟೇ. ಮೂರು ಅಂಗುಲ ಉದ್ದದ ನಾಲಗೆಯನ್ನು ತೃಪ್ತಿಪಡಿಸಲು ಆರು ಅಡಿ ಎತ್ತರದ ಶರೀರಕ್ಕೆ ವಿರೋಧವಾಗುವುದನ್ನು ತಿನ್ನಲು ಹಿಂದೇಟು ಹಾಕುವುದಿಲ್ಲ. ಆ ಕ್ಷಣದಲ್ಲಿ ನಮಗೆ ಆರು ಅಡಿಗಿಂತ ಮೂರು ಅಂಗುಲ ವೇ ಹೆಚ್ಚಿನದೆನಿಸುತ್ತದೆ!

ಆಮೇಲೆ ಆರು ಅಡಿ ಎತ್ತರದ ಶರೀರದ ಜೊತೆಯಲ್ಲಿ ಮೂರು ಇಂಚು ಉದ್ದದ ನಾಲಗೆಯೂ ಕಾಯಿಲೆ ಬೀಳುತ್ತದೆ! ಕಹಿ ಔಷಧ, ಸಪ್ಪೆ ಪಥ್ಯದ ಶಿಕ್ಷೆಗೆ ಒಳಗಾಗುತ್ತದೆ. ಮಾಡಿದ್ದುಣ್ಣೋ ಮಹರಾಯ!Amrita  sinchana - 10 Tongue and body

ಇದೇ ರೀತಿಯಲ್ಲಿ ನಮ್ಮ ಮನಸ್ಸನ್ನು ಆಕರ್ಷಣೆಗೆ ಒಳಪಡಿಸಿ ಇಡೀ ಜೀವನವನ್ನೇ ಕುಲಗೆಡಿಸುವ – ನಾಲಗೆ ಯಂತಹ – ಜನ ನಮ್ಮ ಸುತ್ತಲೂ ಇರುತ್ತಾರೆ. ಇಂಥವರ ವಿಚಾರದಲ್ಲಿ ನಾವು ಎಚ್ಚರದಿಂದಿರದಿದ್ದರೆ ಕ್ಷಣಿಕ ಸುಖಕ್ಕಾಗಿ ಇಡೀ ಜೀವಮಾನವನ್ನು ಬಲಿ ಕೊಡಬೇಕಾಗಿ ಬರುತ್ತದೆ. ಆಮೇಲೆ ಏನೂ ಮಾಡಲಿಕ್ಕಾಗುವುದಿಲ್ಲ.

ನೀವು ತಿನ್ನುವ ಆಹಾರದ ರುಚಿ ಎಲ್ಲಿಯವರೆಗೆ? ಗಂಟಲಿನ ಆಳಕ್ಕೆ ಜಾರುವವರೆಗೆ, ಆಮೇಲೆ ಏನೂ ಇಲ್ಲ!

ಅಂದರೆ, ಈ ರುಚಿ ಎನ್ನುವುದು ಕ್ಷಣಿಕ ಅನುಭವ.

ಗಂಟಲಿನ ಕೆಳಗೆ ಹೋದ ಮೇಲೆ ಆ ಆಹಾರದ ರುಚಿಯಿಂದ ಏನೂ ಇಲ್ಲ. ಅದರ ಸತ್ವ ಮಾತ್ರ (ಇದ್ದರೆ) ಉಪಯೋಗಕ್ಕೆ ಬರುತ್ತದೆ. ಜಠರದಲ್ಲಿ ಜೀರ್ಣಗೊಂಡ ಆಹಾರವು ಸಣ್ಣ ಕರುಳು, ದೊಡ್ಡ ಕರುಳುಗಳಲ್ಲಿ ರಕ್ತಗತವಾಗುತ್ತದೆ.

ಹೀಗೆ ರಕ್ತಗತವಾಗುವುದು ಒಳ್ಳೆಯ ರುಚಿಯ ವಿಷ ಪದಾರ್ಥವಾಗಿದ್ದರೆ? ಸಿಹಿ ಸಕ್ಕರೆಯನ್ನು ಸಿಹಿ ವಿಷ ಅನ್ನುವುದು ನಿಮಗೆ ಗೊತ್ತಿರಬಹುದು. ನಾಲಗೆಗೆ ಸವಿ ಎನಿಸುವ ಸಕ್ಕರೆಯು ದೇಹಕ್ಕೆ ವಿಷವಾಗಿ ಪರಿಣಮಿಸುತ್ತದೆ! ಆದಕಾರಣ ರುಚಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ನಾಲಗೆ ಮತ್ತು ಶರೀರಗಳು ಎಷ್ಟೆಲ್ಲ ಪಾಠ ಬೋಧಿಸುತ್ತವಲ್ಲವೇ?

 

Amrita  sinchana – 10 Tongue and body