Thursday, September 17, 2026

BDA Apartments

ಮುಂದಿನ ಬಾರಿ ಕರ್ನಾಟಕದ ಸಿಎಂ ನಾನೇ ಎಂದ ಎಚ್ಡಿಕೆ ! BDA JK_Adv BDA Adv
Home Front Page ಮುಂದಿನ ಬಾರಿ ಕರ್ನಾಟಕದ ಸಿಎಂ ನಾನೇ ಎಂದ ಎಚ್ಡಿಕೆ !

ಮುಂದಿನ ಬಾರಿ ಕರ್ನಾಟಕದ ಸಿಎಂ ನಾನೇ ಎಂದ ಎಚ್ಡಿಕೆ !

ತುಮಕೂರು, ಜೂನ್ 26, 2022 (www.justkannada.in): ಮುಂದಿನ ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗುವುದು ನಾನೇ ಎಂದು ಹೇಳಿದ್ದಾರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ.

ಜನರ ಆರ್ಶೀವಾದ, ಪರಮ ಪೂಜ್ಯರ ಕೃಪೆ ಇದ್ದರೆ ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವ ರೀತಿ ಮುಖ್ಯ ಮಂತ್ರಿ ಯಾಗುತ್ತೇನೋ ಗೊತ್ತಿಲ್ಲ, ಮೂರನೇ ಬಾರಿ ಜನರ ಆರ್ಶೀವಾದ ದೊರೆತರೆ, ಸಿಎಂ ಆಗೇ ಆಗುತ್ತೀನಿ ಎಂದರು.

ಜಿಲ್ಲೆಯ ನೀರಾವರಿ ಯೋಜನೆ ದೇವೇಗೌಡರ ಕೊಡುಗೆ, ದೇವೇಗೌಡರ ಆರೋಗ್ಯ ಕೆಡುತ್ತಿದೆ, ಅವರು ಇಂದು ನೋವಿನಲ್ಲಿದ್ದರೆ ಅದು ಇಲ್ಲಿನ ಕುತಂತ್ರದ ರಾಜಕೀಯವೇ ಕಾರಣ. ವಿರೋಧ ಪಕ್ಷದಲ್ಲಿದ್ದು ಕೊಂಡೆ ದೇವೇಗೌಡರು ಅನೇಕ ಕೊಡುಗೆ ನೀಡಿದ್ದಾರೆ ಎಂದರು.