ಅಲ್ಲು ಅರ್ಜುನ್’ಗೆ ಇನ್ಸ್ಟಾಗ್ರಾಮ್ನಲ್ಲಿ 10 ಮಿಲಿಯನ್ ಫಾಲೋವರ್ಸ್

ಬೆಂಗಳೂರು, ಜನವರಿ 08, 2021 (www.justkannada.in): ಇನ್ಸ್ಟಾಗ್ರಾಮ್ನಲ್ಲಿ ನಟ ಅಲ್ಲು ಅರ್ಜುನ್ 10 ಮಿಲಿಯನ್ ಫಾಲೋವರ್ಸ್ ಗಳಿಸಿದ್ದಾರೆ.

ಯೆಸ್. 10 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕೆಲವೇ ಭಾರತೀಯ ನಟರ ಪಟ್ಟಿಗೆ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸೇರಿದ್ದಾರೆ.

ಅಂದಹಾಗೆ ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹ ರೆಡ್ಡಿ ಮತ್ತು ಮಕ್ಕಳಾದ ಅಲ್ಲು ಅಯಾನ್ ಮತ್ತು ಅಲ್ಲು ಅರ್ಹ ಅವರೊಂದಿಗಿನ ಸಾಕಷ್ಟು ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ.

ನಟಿ ಕಾಜಲ್ ಅಗರ್ವಾಲ್ 10 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಸಾಧನೆ ಮಾಡಿದ ದಕ್ಷಿಣದ ಮೊದಲ ನಟಿ.