ಭಾರತ-ಆಸಿಸ್ 3ನೇ ಟೆಸ್ಟ್: ಭರ್ಜರಿ ದಾಖಲೆಯ ಶತಕ ಗಳಿಸಿದ ಸ್ಟೀವ್ ಸ್ಮಿತ್

ಸಿಡ್ನಿ, ಜನವರಿ 08, 2021 (www.justkannada.in): ಟೀಂ ಇಂಡಿಯಾ ವಿರುದ್ಧದ 3ನೇ ಟೆಸ್ಟ್ ನಲ್ಲಿ ಸ್ಟೀವ್ ಸ್ಮಿತ್ 27 ನೇ ಟೆಸ್ಟ್ ಶತಕ ಸಿಡಿಸಿದ್ದಾರೆ.

ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಉತ್ತಮ ಪ್ರದರ್ಶನ ತೋರಿರಲಿಲ್ಲ. ಇದೀಗ ಭರ್ಜರಿ ಶತಕದೊಂದಿಗೆ ಮತ್ತೆ ಫಾರ್ಮ್ ಗೆ ಮರಳಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ, ಸ್ಟೀವ್ ಸ್ಮಿತ್ ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಶತಕ ಗಳಿಸಿದರು.

ಈ ಮೂಲಕ ಡಾನ್ ಬ್ರಾಡ್ಮನ್ ನಂತರ ವೇಗವಾಗಿ 27 ಟೆಸ್ಟ್ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಟೀವ್ ಸ್ಮಿತ್ ಪಾತ್ರರಾಗಿದ್ದಾರೆ.