ಗಾಂಜಾ ಸೇವನೆ ಆರೋಪ: ಪೊಲೀಸ್ ವಿಚಾರಣೆಗೆ ಹೆದರಿ ಫೋಟೊಗ್ರಾಫರ್ ಆತ್ಮಹತ್ಯೆ

ಮೈಸೂರು,ಜನವರಿ,19,2023(www.justkannada.in):  ಗಾಂಜಾ ಸೇವನೆ ಆರೋಪ ಪೊಲೀಸ್ ವಿಚಾರಣೆಗೆ ಹೆದರಿ ಫೋಟೊಗ್ರಾಫರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಭಿಷೇಕ ನೇಣಿಗೆ ಶರಣಾದ ಯುವಕ. ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ನೇಹಿತನೊಬ್ಬನಿಂದ ಬರಬೇಕಿದ್ದ ಸಾಲದ ಹಣ ಪಡೆಯಲು ತೆರಳಿದ್ದೆ. ಕೆಲವರು ಗಾಂಜಾ ಸೇವನೆ ಮಾಡಿದ್ದರು. ಆ ಸಮಯದಲ್ಲಿ ಆ ಸ್ಥಳಕ್ಕೆ ಪೊಲೀಸರು ಬಂದರು. ನನ್ನನ್ನು ಅವರೊಂದಿಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ನೀನು ಗಾಂಜಾ ವ್ಯಸನಿಯೇ ಎಂದು ಕೀಳಾಗಿ ನೋಡಿ ಹಿಯಾಳಿಸಿದರು.

ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ತರಹದ ದೂರುಗಳು ಸಹಿಸಲು ಅಸಾಧ್ಯ. ನನ್ನನ್ನು ದಯವಿಟ್ಟು ಕ್ಷಮಿಸಿ, ಏನೇ ಕಷ್ಟ ಬಂದರು ಇದುವರೆಗೂ ಹೇಡಿತನ ಮಾಡದೆ ಇದ್ದಿದಕ್ಕೆ ನನಗೆ ಸಿಕ್ಕ ಪ್ರತಿಫಲ. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರು ಕೊಲೆಗಾರ ಆಗುವುದಿಲ್ಲ. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. I AM VERY SORRY MOM DAD ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿ ಅಭಿಷೇಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಕುರಿತು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Alleged-marijuana-Photographer- commits -suicide –mysore