ಮುಂದಿನ ದಶಕ ನೀರಾವರಿ ದಶಕ: ಎಲ್ಲಾ ಯೋಜನೆಗಳನ್ನ  ಪೂರ್ಣಗೊಳಿಸುವ ಸಂಕಲ್ಪ ತೊಟ್ಟ ಸಿಎಂ ಬೊಮ್ಮಾಯಿ.

ಯಾದಗಿರಿ,ಜನವರಿ,19,2023(www.justkannada.in): ಒಂದು ಹನಿ ನೀರಿಗೆ ಹೆಚ್ಚು ನೀರಾವರಿ ಮಾಡಬೇಕು ಇದು ಪ್ರಧಾನಿ ಮೋದಿ ಅವರ ಘೋಷಣೆಯಾಗಿದೆ.  ಯುಪಿಎ ಸರ್ಕಾರದಿಂದ ಹಲವು ಯೋಜನೆಗಳು ತಡವಾದವು. ಅಂದಿನ ಸರ್ಕಾರ ಯೋಜನೆಗೆ ಟೆಂಡರ್ ಮಾಡಿದರು ಆದರೆ ಹಣ ಕೊಟ್ಟಿದ್ದು ಪ್ರಧಾನಿ ಮೋದಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಯಾದಗಿರಿ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮುಂದಿನ ದಶಕವನ್ನು ನೀರಾವರಿ ದಶಕ ಎಂದು ಘೋಷಣೆ ಮಾಡಿದರು. ಹೆಚ್ಚು ಸಂಪನ್ಮೂಲ, ಹಣ ಒದಗಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ ತೊಟ್ಟರು.

ಪ್ರತಿ ಹನಿ ನೀರನ್ನೂ ಸಮಗ್ರವಾಗಿ ಬಳಸಬೇಕು ಎಂಬ ಮೋದಿ ಅವರ ಆಶಯವನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಆರಂಭವಾಗಿತ್ತು. ಆದರೆ ನಂತರ ಯುಪಿಎ ಸರ್ಕಾರದಿಂದ ನಮಗೆ ಬರಬೇಕಿದ್ದ ಈ ಯೋಜನೆ ತಡವಾಯಿತು. ಮುಂದೆ 2014ರಲ್ಲಿ ಮೋದಿ ಪ್ರಧಾನಿಯಾದ ನಂತರ 2015ರಲ್ಲಿ ತ್ವರಿತಗತಿಯ ಯೋಜನೆಯಲ್ಲಿ ಈ ಕಾಮಗಾರಿ ಆರಂಭವಾಯಿತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯಕ್ಕೆ 1011 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯಕ್ಕೆ ಹೆಚ್ಚು ಅನುದಾನ ಕೊಟ್ಟ ಕೀರ್ತಿ ಪ್ರಧಾನಿ ಮೋದಿಯದ್ದು.   ಅಂದಿನ ಸರ್ಕಾರ ಯೋಜನೆಗೆ ಟೆಂಡರ್ ಮಾಡಿದರು ಆದರೆ ಹಣ ಕೊಟ್ಟಿದ್ದು ಮೋದಿ. ಇಂಡಿ ಜೇವರರ್ಗಿ ಕೊನೆ ಭಾಗಕ್ಕೂ ನೀರು ಹರಿಸಲು ಯೋಜನೆ ಜಾರಿಹೊಳಿಸಲಾಗುತ್ತಿದೆ ಅಚ್ಚುಕಟ್ಟು ಪ್ರದೇಶದ ಎಲ್ಲಾ ಜಮೀನಿಗೆ ನೀರು ತಲುಪಿಸುವ ಯೋಜನೆಯಾಗಿದೆ.  ಇಡೀ ದೇಶದಲ್ಲೇ ಮೊದಲ ಬಾರಿಗೆ ಸ್ಕಾಡಾ ಯೋಜನೆ ಜಾರಿಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

Key words: Next Decade- Irrigation –Decade-CM Bommai