Tuesday, September 22, 2026

BDA Apartments

ಡ್ರಗ್ಸ್ ಸೇವನೆ ಆರೋಪ: ಸಿದ್ಧಾಂತ್ ಕಪೂರ್ ಸೇರಿ 6 ಮಂದಿ ಬಂಧನ BDA JK_Adv BDA Adv
Home Crime ಡ್ರಗ್ಸ್ ಸೇವನೆ ಆರೋಪ: ಸಿದ್ಧಾಂತ್ ಕಪೂರ್ ಸೇರಿ 6 ಮಂದಿ ಬಂಧನ.

ಡ್ರಗ್ಸ್ ಸೇವನೆ ಆರೋಪ: ಸಿದ್ಧಾಂತ್ ಕಪೂರ್ ಸೇರಿ 6 ಮಂದಿ ಬಂಧನ.

ಬೆಂಗಳೂರು,ಜೂನ್,3,2022(www.justkannada.in):  ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ  ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ  ತಡರಾತ್ರಿ ಪೊಲೀಸರು ನಗರದ ಜಿ.ಟಿ ಮಾಲ್  ಬಳಿ ದಿ ಪಾರ್ಟಿ ಫೈವ್ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಹೋಟೆಲ್ ಪಾರ್ಟಿಯಲ್ಲಿ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್ ಭಾಗಿಯಾಗಿರುವುದು ದೃಢಪಟ್ಟಿದ್ದು, ಪಾರ್ಟಿಯಲ್ಲಿ ಒಟ್ಟು ಐವರು ಡ್ರಗ್ಸ್ ಸೇವಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಹೀಗಾಗಿ ಸಿದ್ದಾಂತ್ ಕಪೂರ್ ಸೇರಿ 6 ಮಂದಿಯನ್ನ ಬಂಧಿಸಿದ್ದಾರೆ. ಹಿಂದಿ ಚಲನಚಿತ್ರ ತಾರೆ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್ ಕೂಡ 2020 ರ ವೆಬ್ ಸರಣಿ ‘ಭೌಕಾಲ್’ ನಲ್ಲಿ ಚಿಂಟು ದೇಧಾ ಪಾತ್ರವನ್ನು ನಿರ್ವಹಿಸಿದ ನಟರಾಗಿದ್ದಾರೆ.

Key words: Alleged- Drugs -6 arrested -including -Siddhant Kapoor