Thursday, August 13, 2026

BDA Apartments

Home Cinema ಪುನೀತ್ ರಾಜ್ ಕುಮಾರ್ ‘ಜೇಮ್ಸ್’ ಸೆಟ್ಟೇರುವ ದಿನಾಂಕ ಫಿಕ್ಸ್ !

ಪುನೀತ್ ರಾಜ್ ಕುಮಾರ್ ‘ಜೇಮ್ಸ್’ ಸೆಟ್ಟೇರುವ ದಿನಾಂಕ ಫಿಕ್ಸ್ !

ಬೆಂಗಳೂರು, ಜನವರಿ 07, 2019 (www.justkannada.in): ಪವರ್ ಸ್ಟಾರ್ ಯುವರತ್ನ ಚಿತ್ರದ ಚಿತ್ರೀಕರಣದ ನಡುವೆಯೂ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.

ಯುವರತ್ನ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಲಿರುವ ಪವರ್ ಸ್ಟಾರ್, ಮುಂದಿನ ಬಹುನಿರೀಕ್ಷೆಯ ಜೇಮ್ಸ್ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ.

ಈಗಾಗಲೆ ಟೈಟಲ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಜೇಮ್ಸ್ ಚಿತ್ರದ ಮುಹೂರ್ತ ಇದೆ ತಿಂಗಳು 19ಕ್ಕೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಭರ್ಜರಿ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.