‘ಜಂಟಲ್’ಮನ್’ ಟ್ರೇಲರ್ ರಿಲೀಸ್ ಮಾಡಿದ ಪವರ್ ಸ್ಟಾರ್, ಧ್ರುವ ಸರ್ಜಾ

ಬೆಂಗಳೂರು, ಜನವರಿ 07, 2019 (www.justkannada.in): ಜಂಟಲ್ಮನ್ ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಧ್ರುವಾ ಸರ್ಜಾ ಸೇರಿ ರಿಲೀಸ್ ಮಾಡಿದ್ದಾರೆ.

ಗುರು ದೇಶಪಾಂಡೆ ನಿರ್ಮಾಣದಲ್ಲಿ ಜಡೇಶ್ ಕುಮಾರ್ ನಿರ್ದೇಶಿಸಿರುವ, ಪ್ರಜ್ವಲ್ ದೇವರಾಜ್ ಹೀರೋ ಆಗಿ ನಟಿಸಿರುವ ಸಿನಿಮಾ ಜಂಟಲ್ಮನ್.

ಟ್ರೇಲರ್ ನೋಡಿ ತುಂಬಾ ಖುಷಿ ಆಯ್ತು. ಈ ಚಿತ್ರದ ಮೂಲಕ ತೀರಾ ಹೊಸದೇನನ್ನೋ ಹೇಳಲು ಹೊರಟಿದ್ದಾರೆ ಎಂದು ಪವರ್ ಸ್ಟಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಹದಿನೆಂಟು ಗಂಟೆಗಳ ಕಾಲ ನಿದ್ರೆ ಮಾಡಿ, ಆರು ಗಂಟೆ ಮಾತ್ರ ಎದ್ದಿರುವ ಹೀರೋ ಇತ್ಯಾದಿ ವಿಶೇಷಗಳಿರುವ ಜಂಟಲ್ಮನ್ ಟ್ರೇಲರ್ ವೈಕುಂಠ ಏಕಾದಶಿ ದಿನ ರಿಲೀಸಾಗಿದೆ.