Saturday, August 15, 2026

BDA Apartments

Home Front Page “ವಿಪ್ರರೆಲ್ಲರೂ ಒಗ್ಗಟ್ಟಾಗಿ ಸಂಘಟನೆಗೆ ಒತ್ತು ನೀಡಿ” : ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ...

“ವಿಪ್ರರೆಲ್ಲರೂ ಒಗ್ಗಟ್ಟಾಗಿ ಸಂಘಟನೆಗೆ ಒತ್ತು ನೀಡಿ” : ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ

ಬೆಂಗಳೂರು,ಜನವರಿ,18,2021(www.justkannada.in) : ರಾಜ್ಯಾದ್ಯಂತ ವಿಪ್ರರೆಲ್ಲರೂ ಒಗ್ಗಟ್ಟಾಗಿ ಸಂಘಟನೆಗೆ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹೇಳಿದರು.jk

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ನಡೆದ “ವಿಪ್ರ ಫೋಟೋ ಹಾಗೂ ವಿಡಿಯೋಗ್ರಾಫರ್ ಗಳ ಸಂಘಟನೆಗೆ” ಚಾಲನೆ ನೀಡಿ ಅವರು ಮಾತನಾಡಿದರು.

ನಿಮ್ಮ ಸಂಘಟನೆಗೆ ಮಂಡಳಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು. ನೀವು ಒಗ್ಗಟ್ಟಾಗಿದ್ದಾರೆ ಅಷ್ಟೇ ಸಾಕು. ಮಂಡಳಿಯಲ್ಲೇ ತಿಂಗಳಲ್ಲಿ ಒಂದೆರಡು ಬಾರಿ ನಿಮ್ಮ ಸಭೆ ನಡೆಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಪ್ರ ಬಿಜಿನೆಸ್ ಫೋರಂನ ಅಧ್ಯಕ್ಷ ಜಯತೀರ್ಥ ಮಾತನಾಡಿ, ಸಂಘಟನೆಗೆ ನಮ್ಮ ಪೋರಂನಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಎಲ್ಲರೂ ಸೇರಿ ಒಟ್ಟಿಗೆ ಸಂಘಟನೆ ಬೆಳೆಸೋಣ ಎಂದರು.

ಸಭೆಯಲ್ಲಿ ವಿಪ್ರ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಸಂಘಟನೆ ಅಧ್ಯಕ್ಷರಾಗಿ ಬಿ.ಕೆ.ರಮೇಶ್ ಹಾಗೂ ಸಂಘದ ಕಾರ್ಯದರ್ಶಿಯಾಗಿ ಪ್ರಸನ್ನ ಕುಲಕರ್ಣಿ ಅವರನ್ನು ಆಯ್ಕೆಮಾಡಲಾಯಿತು. ನಂತರ ಮಂಡಳಿಯ ಅಧ್ಯಕ್ಷರು ಹಾಗೂ ಫೋರಂ ಅಧ್ಯಕ್ಷರು ಆಯ್ಕೆಗೊಂಡವರನ್ನು ಅಭಿನಂದಿಸಿದರು.

key words : All Brahmins-Together-organization-Emphasize-President-State Brahmin-Development-Board-Chidanandamurthy