MYSORE DASARA: ಆರಂಭಗೊಂಡಿದೆ ಯದುವಂಶದ ಸಿಂಹಾಜನ ಜೋಡಣೆ ಕಾರ್ಯ.

The assembly of the throne is being done for a religious function, a private durbar, conducted by the royal family. The assembly of the throne will be done in the presence of the royal family Pramoda Devi Wodeyar under tight security from the strong room. Entry of tourists to the palace is prohibited from 8:30 am to 1 pm. The spare parts of the gold throne and the spare parts of the silver Bhadrasana will be brought to the Durbar Hall and assembled.

vtu

ಮೈಸೂರು,ಸೆ.೧೬,೨೦೨೫: ದಸರಾ (Dasara) ಹಿನ್ನೆಲೆಯಲ್ಲಿ ಅರಮನೆಯಲ್ಲಿ (Mysuru Palace) ಇಂದು ಸಿಂಹಾಸನ ಜೋಡಣೆ ಕಾರ್ಯ ಆರಂಭ. ಈ ಹಿನ್ನೆಲೆ ಮಂಗಳವಾರ ಮಧ್ಯಾಹ್ನದವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಾಜವಂಶ್ಥರು ನಡೆಸುವ ಧಾರ್ಮಿಕ ಕಾರ್ಯ,  ಖಾಸಗಿ ದರ್ಬಾರ್‌ಗಾಗಿ ಈ ಸಿಂಹಾಸನ ಜೋಡಣೆ ನಡೆಯುತ್ತಿದೆ. ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ  ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ನಡೆಯಲಿದೆ.

ಬೆ. 8:30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಚಿನ್ನದ ಸಿಂಹಾಸನದ ಬಿಡಿಭಾಗ ಹಾಗೂ ಬೆಳ್ಳಿಯ ಭದ್ರಾಸನದ ಬಿಡಿ ಭಾಗಗಳನ್ನ ದರ್ಬಾರ್ ಹಾಲ್‌ಗೆ ತಂದು ಜೋಡಣೆ ಮಾಡಲಾಗುವುದು.

ಬೆಳ್ಳಿ ಭದ್ರಾಸನವನ್ನ ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗುವುದು. ಸಿಂಹಾಸನ ಜೋಡಣೆ ಕಾರ್ಯ ನಡೆಯುವ ವೇಳೆ ದರ್ಬಾಲ್ ಹಾಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮೆರಾಗೆ ಪರದೆ ಹಾಕಲಾಗುವುದು.

ಸಿಂಹಾಸನ ಜೋಡಣೆ ಕಾರ್ಯದ ನಿಮಿತ್ತ ಬೆಳಗ್ಗೆಯೇ ದರ್ಬಾರ್ ಹಾಲ್‌ನಲ್ಲಿ ಗಣಪತಿ, ಚಾಮುಂಡಿ ಪೂಜೆ ಸೇರಿಂದತೆ ಕೆಲ ಹೋಮ ಹವನ ನಡೆಯಲಿದೆ. ಪೂಜೆ ಮುಗಿದ ಬಳಿಕ ಸಿಂಹಾಸನ ಬಿಡಿಭಾಗವನ್ನ ದರ್ಬಾರ್ ಹಾಲ್‌ಗೆ ತಂದು ಸಿಂಹಾಸನ ಜೋಡಣೆ ಮಾಡಲಾಗುವುದು.

KEY WORDS:  aligning the throne, the Yadu dynasty, Mysore palace, dasara2025

vtu

SUMMARY: 

The process of aligning the throne of the Yadu dynasty has begun at Mysore palace today.

The assembly of the throne is being done for a religious function, a private durbar, conducted by the royal family. The assembly of the throne will be done in the presence of the royal family Pramoda Devi Wodeyar under tight security from the strong room.

Entry of tourists to the palace is prohibited from 8:30 am to 1 pm. The spare parts of the gold throne and the spare parts of the silver Bhadrasana will be brought to the Durbar Hall and assembled.