Monday, September 21, 2026

BDA Apartments

ಗಾಲ್ವಾನ್ ಹುತಾತ್ಮ ಯೋಧರ ಕಥೆಗೆ ದೃಶ್ಯ ರೂಪ ನೀಡಲಿದ್ದಾರೆ ಅಜಯ್ ದೇವಗನ್ BDA JK_Ad...
Home Cinema ಗಾಲ್ವಾನ್ ಹುತಾತ್ಮ ಯೋಧರ ಕಥೆಗೆ ದೃಶ್ಯ ರೂಪ ನೀಡಲಿದ್ದಾರೆ ಅಜಯ್ ದೇವಗನ್

ಗಾಲ್ವಾನ್ ಹುತಾತ್ಮ ಯೋಧರ ಕಥೆಗೆ ದೃಶ್ಯ ರೂಪ ನೀಡಲಿದ್ದಾರೆ ಅಜಯ್ ದೇವಗನ್

ಮುಂಬೈ, ಜುಲೈ 04, 2020 (www.justkannada.in): ಭಾರತ – ಚೀನ ನಡುವೆ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಮಡಿದ ಭಾರತೀಯ ಯೋಧರ ಕಥೆಯನ್ನು ತೆರೆ ಮೇಲೆ ಬರಲಿದೆ.

ಈ ಸಂಬಂಧ ನಟ- ನಿರ್ಮಾಪಕ ಅಜಯ್ ದೇವಗನ್. ಅಧಿಕೃತ ಘೋಷಣೆ ಮಾಡಿದ್ದಾರೆ. ಅಜಯ್ ದೇವಗನ್ ಮುಂದಿನ ಚಿತ್ರ ಭುಜ್ : ದಿ ಪ್ರೆಡ್ ಆಫ್ ಇಂಡಿಯಾ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೆ ಸಿದ್ದವಾಗಿರುವಾಗಲೇ ಗಾಲ್ವಾನ್ ಕಣಿವೆಯಲ್ಲಿ ಮಡಿದ ಯೋಧರ ಪಯಣವನ್ನು ದೃಶ್ಯ ರೂಪದಲ್ಲಿ ತೆರೆ ಮೇಲೆ ತರುವ ಚಿಂತನೆ ನಡೆಸಿದ್ದಾರೆ.

ನೈಜ ಘಟನೆಯಧಾರಿತ ಚಿತ್ರದಲ್ಲಿ ಚೀನಾದ ಯೋಧರಿಂದ ಮಡಿದ 20 ಭಾರತೀಯ ಯೋಧರ ಕತೆಯಿರಲಿದೆ. ಕಲಾವಿದರು ಹಾಗೂ ಪಾತ್ರವರ್ಗದ ಆಯ್ಕೆ ಹಾಗೂ ಚಿತ್ರದ ಹೆಸರು ಇನ್ನಷ್ಟೇ ಅಂತಿಮವಾಗಬೇಕಿದೆ.