Thursday, August 13, 2026

BDA Apartments

Home Front Page ವಿಶೇಷ ಶಿಕ್ಷಣ ಕೋರ್ಸ್ ಗೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ವಿಸ್ತರಿಸಿದ ಮೈಸೂರಿನ ಐಶ್(AIISH)

ವಿಶೇಷ ಶಿಕ್ಷಣ ಕೋರ್ಸ್ ಗೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ವಿಸ್ತರಿಸಿದ ಮೈಸೂರಿನ ಐಶ್(AIISH)

ಮೈಸೂರು,ಜೂ,7,2019(www.justkannada.in):  ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಯು ವಿಶೇಷ ಶಿಕ್ಷಣದಲ್ಲಿ ಪದವಿ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

2 ವರ್ಷದ ಬ್ಯಾಚುಲರ್ ಆಫ್ ಎಜುಕೇಷನ್ – ವಿಶೇಷ ಶಿಕ್ಷಣ (ಹಿಯರಿಂಗ್ ಇಂಪೇರ್ಮೆಂಟ್) B.Ed.Spl.Ed. (HI) ಗೆ ಐಶ್ (AIISH)  ಅರ್ಜಿ ಆಹ್ವಾನಿಸಿದ್ದು, ಯಾವುದೇ ಪದವೀಧರರು  ಪದವಿಯಲ್ಲಿ ಒಟ್ಟು 50% (ಎಸ್ಸಿ / ಎಸ್ಟಿಗೆ 45%) ಅಂಕ ಪಡೆದವರು 17.06.2019 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಹತಾ ಮಾನದಂಡ ಶುಲ್ಕ ವಿವರದ  ಬಗ್ಗೆ ಸಂಸ್ಥೆಯ ವೆಬ್ ಸೈಟ್ ನಿಂದ ಮಾಹಿತಿ ಪಡೆಯಬಹುದು. ಸಂಪರ್ಕಿಸಬೇಕಾದ ವೆಬ್ ಸೈಟ್ ವಿಳಾಸ www.aiishmysore.in

ಈ ಕೋರ್ಸ್ ಗಳನ್ನ ವ್ಯಾಸಂಗ ಮಾಡುವುದರಿಂದ ವ್ಯಾಪಕ ಶ್ರೇಣಿಯ ಉದ್ಯೋಗಗಳು ಲಭ್ಯವಿರಲಿವೆ.  ಮುಖ್ಯವಾಗಿ ಶ್ರವಣದೋಷ ಮಕ್ಕಳಿಗೆ ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಬಹುದು. ಹಾಗೆಯೇ ಮುಖ್ಯವಾಹಿನಿಯ ಶಾಲೆಗಳಲ್ಲಿ ಸಂಪನ್ಮೂಲ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸಬಹುದು.ಜತೆಗೆ ಈ ಕೋರ್ಸ್ ಯಶಸ್ವಿ ಮುಗಿದ ನಂತರ M.Ed.Spl.Ed. (HI)  ಕೋರ್ಸ್ ಅಧ್ಯಯನ ಮಾಡಬಹುದು. ಹೀಗಾಗಿ ಪದವಿ ಪಡೆದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಐಶ್(AIISH) ತಿಳಿಸಿದೆ.

Key words:  AIISH extends last date for applications for Course / Programme in Special Education
#AIISH #extends #applications #Course #Special Education