ಫೆ.13ರಿಂದ 17ರ ವರೆಗೆ ಬೆಂಗಳೂರಲ್ಲಿ ಏರೊ-ಇಂಡಿಯಾ: ಅತ್ಯಾಧುನಿಕ ವಿಮಾನ ಕಣ್ತುಂಬಿಕೊಳ್ಳುವ ಅವಕಾಶ

ಬೆಂಗಳೂರು, ಫೆಬ್ರವರಿ 05, 2023 (www.justkannada.in): ಬೆಂಗಳೂರಿನಲ್ಲಿ ನಡೆಯಲಿರುವ ಏರೊ-ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಅತ್ಯಾಧುನಿಕ ವಿಮಾನಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಂಪನಿಯು ಎಫ್‌-21 ಯುದ್ಧ ವಿಮಾನ, ಎಸ್‌-92 ಬಹುಪಯೋಗಿ ಹೆಲಿಕಾಪ್ಟರ್‌, ಎಂಎಚ್‌ -60 ಆರ್‌ ಮಲ್ಟಿ ಮಿಷನ್‌ ವಿಮಾನ ಸೇರಿದಂತೆ ಅತ್ಯಾಧುನಿಕ ವಿಮಾನಗಳನ್ನು ಪ್ರದರ್ಶಿಸಲಾಗುತ್ತದೆ.

ಯಲಹಂಕದಲ್ಲಿರುವ ವಾಯುನೆಲೆಯ ಆವರಣದಲ್ಲಿ ಫೆ. 13ರಿಂದ 17ರ ವರೆಗೆ 14ನೇ ಏರೊ-ಇಂಡಿಯಾ ಪ್ರದರ್ಶನ ನಡೆಯಲಿದೆ.

‘ಅತ್ಯಾಧುನಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಏರೋ-ಇಂಡಿಯಾ 2023ರಲ್ಲಿ ಪಾಲ್ಗೊಳ್ಳಲು ನಾವು ಉತ್ಸುಕರಾಗಿದ್ದೇವೆ’ ಎಂದು ಲಾಕ್‌ಹೀಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ವಿಲಿಯಮ್ ಬ್ಲೇರ್ ಹೇಳಿದ್ದಾರೆ.