Sunday, August 23, 2026

BDA Apartments

Home Cinema ಮೈಸೂರಿನಲ್ಲಿ ಸಿನಿ ಕಲಾವಿದರಿಗೆ ನೆರವಾದ ನಟಿ ತಾರಾ ಅನುರಾಧ

ಮೈಸೂರಿನಲ್ಲಿ ಸಿನಿ ಕಲಾವಿದರಿಗೆ ನೆರವಾದ ನಟಿ ತಾರಾ ಅನುರಾಧ

ಮೈಸೂರು: ಮೈಸೂರಿನಲ್ಲಿ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದ ನೂರು ಸಹ ಕಲಾವಿದರು, ಮೇಕಪ್ ಕಲಾವಿದರು, ಲೈಟ್ಮೆನ್ ಪ್ರೊಡಕ್ಷನ್ ವಿಭಾಗದವರು. ಸಮನ್ವಯಕಾರರು ಎಲ್ಲರಿಗೂ ಅಗತ್ಯ ವಸ್ತುಗಳ ಬಳಕೆ ಕಿಟ್ ವಿತರಿಸಲಾಯ್ತು. ಸುಣ್ಣದಕೇರಿಯ ನಾಲಾ ಬೀದಿಯಲ್ಲಿನ ತಿಪ್ಪಯ್ಯನ ಗರಡಿ ಮುಂದೆ ಕಿಟ್ ವಿತರಿಸಲಾಯ್ತು.

ತಾರಾ ಸಿನಿ ಕಲಾವಿದ ಮೈಸೂರು ಶಿವಣ್ಣ ಮೂಲಕ ನೂರಕ್ಕೂ ಹೆಚ್ಚು ಕಲಾವಿದರಿಗೆ ಕಿಟ್ ವಿತರಿಸಿದ್ರು. ಫೋನ್ ಮೂಲಕ ಮಾತನಾಡಿದ ತಾರಾ ಚಿತ್ರರಂಗದಲ್ಲಿ ಬೆಂಗಳೂರಿನ ನಂತರ ಹೆಚ್ಚಿನ ಕಲಾವಿದರಿರುವುದು ಮೈಸೂರಿನಲ್ಲಿ ಇಲ್ಲಿ ಕೆಲ ಕಲಾವಿದರು ಮತ್ತು ತಂತ್ರಜ್ಞರು ಸಂಕಷ್ಟದಲ್ಲಿದ್ದಾರೆ ಅವರಿಗೆ ನೆರವಾಗಲು ಸೂಚಿಸಿದ್ದೇನೆ. ವಿಷ್ಣುವರ್ಧನ್ ಅವರಿಗೆ ಮೇಕಪ್ ಮೆನ್ ಆಗಿದ್ದ ಮಾಧವನ್ ಎಂಬ ಕಲಾವಿದರಿಗೆ ನೆರವಾಗಲು ಸೂಚಿಸಿದ್ದೇನೆ. ಚಲನಚಿತ್ರ ರಂಗದ ಸಹಕಲಾವಿದರು ಮತ್ತು ತಂತದರಜ್ಞರಿಗೆ ಬರುವ ದಿನಗಳಲ್ಲಿ ವಿಶೇಷ ನೆರವಾಗುವ ಯೋಜನೆ ಇದೆ ಎಂದು ತಿಳಿಸಿದ್ರು.

ಕಲಾವಿದ ಮೈಸೂರು ಶಿವು ಮಾತನಾಡಿ, ನಟಿ ಮತ್ತು ವಿಧಾನ ಪರಿಷತ್ ಸದಸ್ಯರಾದ ತಾರಾ ಅವರ ಸೂಚನೆ‌ ಮೇರೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ನೆರವಿನೊಂದಿಗೆ ಶಾಸಕರಾದ‌ ನಾಗೇಂದ್ರ ಅವರು‌ ಕಿಟ್ ಪೂರೈಸಿದ್ದರು. ಮೈಸೂರಿನಲ್ಲಿ ನೂರಕ್ಕು ಹೆಚ್ಚು ಕಲಾವಿದರು ಲಾಕ್ ಡೌನ್ ಆದಮೇಲೆ ಸಂಕಷ್ಟದಲ್ಲಿದ್ದಾರೆ ಅವರೆಲ್ಲರಿಗೂ ನೆರವಾಗುತ್ತಿದ್ದೇವೆ ಎಂದರು.