‘ಕೋಟಿಗೊಬ್ಬ-3’ನಲ್ಲಿ ಸುದೀಪ್ ಜೊತೆ ಸನ್ನಿ ಸ್ಪೆಷಲ್ ಸಾಂಗ್ !

ಬೆಂಗಳೂರು, ಆಗಸ್ಟ್ 20, 2020 (www.justkannada.in): ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ವಿಶೇಷ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರೆ.

ಈ ಹಿಂದೆ ಡಿಕೆ ಮತ್ತು ಲವ್ ಯು ಆಲಿಯಾ ಸಿನಿಮಾಗಳ ಸ್ಪೆಷಲ್ ಸಾಂಗ್ ಗಳಲ್ಲಿ ಕುಣಿದಿದ್ದ ಸನ್ನಿ ಈ ಬಾರಿ ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಕನ್ನಡ ಸಿನಿ ಪ್ರಿಯರನ್ನು ರಂಜಿಸಿದ್ದಾರೆ.

ಸನ್ನಿ ಲಿಯೋನ್ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಕುರಿತು ಇದುವರೆಗೂ ಸಿನಿಮಾ ತಂಡ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಅಂದಹಾಗೆ ಕೋಟಿಗೊಬ್ಬ 3 ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ.