Monday, October 12, 2026

Dasara Wishes

Happy Dasara
Home Cinema ಬಾಲಿವುಡ್’ನಲ್ಲೂ ತಳವೂರುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ: 3ನೇ ಚಿತ್ರ ಕನ್ಫರ್ನ್

ಬಾಲಿವುಡ್’ನಲ್ಲೂ ತಳವೂರುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ: 3ನೇ ಚಿತ್ರ ಕನ್ಫರ್ನ್

ಬೆಂಗಳೂರು, ಏಪ್ರಿಲ್ 28, 2021 (www.justkannada.in):

ನಟಿ ರಶ್ಮಿಕಾ ಇನ್ನೂ ಎರಡು ಬಾಲಿವುಡ್ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.

ಹೌದು. ಮಿಷನ್ ಮಜ್ನು ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ, ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಅಮಿತಾಬ್ ಬಚ್ಚನ್ ಚಿತ್ರದಲ್ಲೂ ನಟಿಸುವ ಅವಕಾಶ ಪಡೆದಿರುವ ರಶ್ಮಿಕಾ ಚಿತ್ರದಲ್ಲಿ ಅಮಿತಾಬ್ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕೊರೊನಾ ಹಾವಳಿ ಜಾಸ್ತಿಯಾದ ಪರಿಣಾಮ ಚಿತ್ರೀಕರಣ ಸ್ಥಗಿತಗೊಂಡಿದೆ.

ಸಾಮಾಜಿಕ ಜಾಲತಾಣದ ಮೂಲಕ ಲೈವ್ ಬಂದಿದ್ದ ರಶ್ಮಿಕಾ ಸದ್ಯದಲ್ಲೇ 3ನೇ ಬಾಲಿವುಡ್ ಸಿನಿಮಾಗೆ ಸಹಿ ಮಾಡುವುದಾಗಿ ಹೇಳಿದ್ದಾರೆ.