Sunday, September 20, 2026

BDA Apartments

ಮಗಳ ಹೆಸರಿನ ಗುಟ್ಟು, 2ನೇ ಮಗುವಿನ ಖುಷಿ ಹಂಚಿಕೊಂಡ ರಾಧಿಕಾ BDA JK_Adv BDA Adv
Home Cinema ಮಗಳ ಹೆಸರಿನ ಗುಟ್ಟು, 2ನೇ ಮಗುವಿನ ಖುಷಿ ಹಂಚಿಕೊಂಡ ರಾಧಿಕಾ

ಮಗಳ ಹೆಸರಿನ ಗುಟ್ಟು, 2ನೇ ಮಗುವಿನ ಖುಷಿ ಹಂಚಿಕೊಂಡ ರಾಧಿಕಾ

ಬೆಂಗಳೂರು, ಜೂನ್ 28, 2019 (www.justkannada.in): ಯಶ್-ರಾಧಿಕಾ ಮತ್ತೊಂದು ಮಗುವಿಗೆ ಅಪ್ಪ-ಅಮ್ಮ ಆಗುತ್ತಿರುವ ವಿಷಯ ಗೊತ್ತೇ ಇದೆ.

ಜತೆಗೆ ರಾಧಿಕಾ ಅಭಿನಯದ ಆದಿ ಲಕ್ಷ್ಮಿ ಪುರಾಣ ಚಿತ್ರವೂ ರಿಲೀಸ್ ಗೆ ಸಿದ್ಧವಾಗಿದೆ. ಈ ನಡುವೆ ಸುದ್ದಿಗೋಷ್ಠಿಯಲ್ಲಿ ರಾಧಿಕಾ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮಗಳಿಗೆ ಲಕ್ಷ್ಮೀ ದೇವರ ಹೆಸರಿನಲ್ಲೇ ನಾಮಕರಣ ಮಾಡಬೇಕೆಂಬ ಆಲೋಚನೆಯಿತ್ತು. ಲಕ್ಷ್ಮೀ ದೇವತೆ ಹೆಸರು ‘ಐರಾ’ ಎಂದು ನಾಮಕರಣ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಮತ್ತೊಂದು ಗರ್ಭಿಣಿಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವೈದ್ಯರ ಸಲಹೆ ಪಡೆದು ಎಲ್ಲವೂ ಸರಿ ಆದ ಮೇಲೆಯೇ ನಾವು ಮತ್ತೊಂದು ಮಗುವಿಗೆ ಸಿದ್ಧವಾಗಿರೋದು ಎಂದು ಹೇಳಿದ್ದಾರೆ.