Friday, August 14, 2026

BDA Apartments

Home Cinema ಪುರಿ ಜಗನ್ನಾಥ್ ಜತೆ ರಾಕ್ಹಿಂಗ್ ಸ್ಟಾರ್ ಯಶ್ ‘ಜನ ಗಣ ಮನ’ !

ಪುರಿ ಜಗನ್ನಾಥ್ ಜತೆ ರಾಕ್ಹಿಂಗ್ ಸ್ಟಾರ್ ಯಶ್ ‘ಜನ ಗಣ ಮನ’ !

ಬೆಂಗಳೂರು, ಜುಲೈ 31, 2019 (www.justkannada.in): ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಜನ ಗಣ ಮನ’ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ.

ಯಶ್ ಕೆಜಿಎಫ್’ ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಭಾರತದ ದೊಡ್ಡ ದೊಡ್ಡ ನಿರ್ದೇಶಕರು ಅವರ ಜೊತೆಗೆ ಸಿನಿಮಾ ಮಾಡುವ ಆಸೆ ವ್ಯಕ್ತ ಪಡಿಸುತ್ತಿದ್ದಾರೆ.

ಇದೀಗ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ರಾಕಿ ಬಾಯ್ ಜೊತೆ ಸಿನಿಮಾ ಮಾಡುವ ತಯಾರಿ ನಡೆಸಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗಾಗಿ ಪೂರಿ ಜಗನ್ನಾಥ್ ಕಥೆ ಮಾಡಿದ್ದರು.

ಸಿನಿಮಾಗೆ ‘ಜನ ಗಣ ಮನ’ ಎಂಬ ಶೀರ್ಷಿಕೆ ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಹೇಶ್ ಬಾಬು ಚಿತ್ರದಿಂದ ಹೊರ ನಡೆದಿದ್ದಾರೆ.