ಮಾಲ್ಡೀವ್ಸ್​’ನಲ್ಲಿ ರಾಕಿ ಭಾಯ್ ಆ್ಯಂಡ್ ಫ್ಯಾಮಿಲಿ !

ಬೆಂಗಳೂರು, ಜನವರಿ 19, 2021 (www.justkannada.in): ಈಗ ನಟ ಯಶ್​ ಹಾಗೂ ಪತ್ನಿ ರಾಧಿಕಾ ಪಂಡಿತ್​ ಕುಟುಂಬ ಸಮೇತ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ.

ಯಶ್​ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಈ ಪ್ರಯುಕ್ತ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಟೀಸರ್​ ಕೂಡ ರಿಲೀಸ್ ಆಗಿ ಹೊಸ ದಾಖಲೆ ಸೃಷ್ಟಿಸಿತ್ತು. ಈ ಖುಷಿಯಲ್ಲೇ ಯಶ್​ ಮಾಲ್ಡೀವ್ಸ್​ ಪ್ರವಾಸ ಕೈಗೊಂಡಿದ್ದಾರೆ.

ಯಶ್-ರಾಧಿಕಾ​ ಮಗಳು ಆಯ್ರಾ ಹಾಗೂ ಮಗ ಯಥರ್ವ್​ ಜೊತೆ ಆನಂದದಿಂದ ಸಮಯ ಕಳೆಯುತ್ತಿರುವ ಫೋಟೋವನ್ನು ಯಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಕೆಜಿಎಫ್ ಚಾಪ್ಟರ್​ 2 ಟೀಸರ್​ ಯಶ್​ ಜನ್ಮದಿನದ ಅಂಗವಾಗಿ ಜನವರಿ 8ರಂದು ರಿಲೀಸ್​ ಆಗಬೇಕಿತ್ತು. ಆದರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ದಿನಾಂಕ ಮುಂಡೂಡಿಕೆಯಾಗಿತ್ತು.