‘ರಥಸಪ್ತಮಿ’ ದಿನ ಥಿಯೇಟರ್’ಗೆ ಬರಲಿದೆ ಪೊಗರು

ಬೆಂಗಳೂರು, ಜನವರಿ 19, 2021 (www.justkannada.in): ಪೊಗರು ಚಿತ್ರ ಫೆಬ್ರವರಿ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರದ ರಿಲೀಸ್ ದಿನಾಂಕವನ್ನು ನಟ ಧ್ರುವ ಸರ್ಜಾ ಪ್ರಕಟಿಸಿದ್ದಾರೆ.

ಇನ್ ಸ್ಟಾಗ್ರಾಂ ಲೈವ್ ನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಧ್ರುವ ಸರ್ಜಾ, ರಥಸಪ್ತಮಿ ದಿನವಾದ ಫೆಬ್ರವರಿ 19 ರಂದು ಪೊಗರು ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

ಯಾವುದೇ ನಿರೀಕ್ಷೆ ಮಾಡದೇ ಚಿತ್ರ ನೋಡಿ, ಏಕೆಂದರೆ ನಿರೀಕ್ಷೆಗಿಂತ ಚೆನ್ನಾಗಿ ಚಿತ್ರ ಮೂಡಿ ಬಂದಿದೆ ಎಂದಿದ್ದಾರೆ ಧ್ರುವ. 3 ವರ್ಷಗಳಿಂದ ಈ ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇವೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡಿ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ ಆ್ಯಕ್ಸನ್ ಪ್ರಿನ್ಸ್.