4ನೇ ಟೆಸ್ಟ್ ಕೊನೆ ದಿನದಾಟದಲ್ಲಿ ಶತಕ ವಂಚಿತ ಶುಭಮನ್ ಗಿಲ್

ಬೆಂಗಳೂರು, ಜನವರಿ 19, 2021 (www.justkannada.in): ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಕೊನೆಯ ದಿನದಾಟದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (91) ಶತಕದಿಂದ ವಂಚಿತರಾಗಿದ್ದಾರೆ.

ಶುಭಮನ್​ ಗಿಲ್​ ಅವರು 146 ಎಸೆತಗಳಲ್ಲಿ 91 ರನ್ ಗಳಿಸಿದ ವೇಳೆ ನಥನ್ ಲಯೋನ್ ಬೌಲಿಂಗ್‌ನಲ್ಲಿ ಸ್ಮಿತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

ಶುಭಮನ್ ಗಿಲ್ ಅಮೋಘ ಆಟದಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು ಸಹಿತ 91 ರನ್​ಗಳನ್ನು ಕಲೆಹಾಕಿದ್ದಾರೆ.

ಸದ್ಯ 241 ರನ್ ಗಳಿಸಿರುವ ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಗೆಲುವಿಗೆ 87ರನ್ ಗಳಿಸಬೇಕಿದೆ. 39ರನ್ ಗಳಿಸಿರುವ ಪಂತ್, ಮಯಾಂಕ್ ಅಗರ್ ವಾಲ್ ಕ್ರೀಸ್’ನಲ್ಲಿದ್ದಾರೆ.