ಚಿತ್ರೀಕರಣದ ವೇಳೆ ಗಾಯ: ಬ್ಯಾಕ್ ಟು ಬ್ಯಾಕ್ ಶೂಟಿಂಗ್’ನಿಂದ ಸುದೀಪ್’ಗೆ ವಿಶ್ರಾಂತಿ

ಬೆಂಗಳೂರು, ಜುಲೈ 31, 2019 (www.justkannada.in): ನಟ ಕಿಚ್ಚ ಸುದೀಪ್ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ.

ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳಿಗೆ ವಿರಾಮ ನೀಡಿದ್ದು, ಕೆಲ ಕಾಲ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.

‘ಕೋಟಿಗೊಬ್ಬ 3’ ಚಿತ್ರದ 10 ದಿನಗಳ ಶೆಡ್ಯೂಲ್ ಪೂರ್ಣಗೊಳಿಸಿದ್ದು, ಚಿತ್ರದಲ್ಲಿ ಫೈಟ್ ಸೀಕ್ವೆನ್ಸ್ ಇದೆ. ಈ ಸೀಕ್ವೆನ್ಸ್ ನಲ್ಲಿ ಭಾಗವಹಿಸಿದ್ದ ಸುದೀಪ್ ಅವರಿಗೆ ಬೆನ್ನಿಗೆ ಗಾಯವಾಗಿದೆ .

ಮೂಲಗಳ ಪ್ರಕಾರ ಸುದೀಪ್ ಫೈಟಿಂಗ್ ಸೀನ್ ನಲ್ಲಿ ಭಾಗವಹಿಸಿದ್ದು, ಪೆಟ್ಟು ಬೆನ್ನಿಗೆ ಬಿದ್ದಿದ್ದರಿಂದ ನೋವುಂಟಾಗಿದೆಯಂತೆ. ಆದರೂ ಸುದೀಪ್ ಶೂಟಿಂಗ್ ಮುಂದುವರೆಸಿ ತಮ್ಮ ಸಂಪೂರ್ಣ ಶೆಡ್ಯೂಲ್ ಪೂರ್ಣಗೊಳಿಸಿದ್ದಾರೆ.