‘ಮೈಸೂರು ಮಸಾಲ’ ಚಿತ್ರಕ್ಕೆ ದನಿಯಾದ ರಘು ದೀಕ್ಷಿತ್ !

ಬೆಂಗಳೂರು, ಜುಲೈ 31, 2019 (www.justkannada.in): ಸ್ಯಾಂಡಲ್‌ವುಡ್‌ ಚಿತ್ರತಂಡವೊಂದು ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಸಿನೆಮಾದತ್ತ ಮೊರೆಹೋಗಿದೆ.

‘ಮೈಸೂರು ಮಸಾಲಾ’ ಶೀರ್ಷಿಕೆಯಡಿ ಸಿನೆಮಾ ನಿರ್ಮಿಸುತ್ತಿದ್ದು, ಚಿತ್ರದಲ್ಲಿರುವ ಏಕೈಕ ಹಾಡಿಗೆ ಗಾಯಕ ರಘು ದೀಕ್ಷಿತ್​ ಧ್ವನಿ ನೀಡಿದ್ದು, ಮತ್ತೊಮ್ಮೆ ಹಿಟ್​ ಸಾಂಗ್​ ನೀಡಲು ರೆಡಿಯಾಗಿದ್ದಾರೆ.

ವಾಸುಕಿ ವೈಭವ್ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡು ಲಾಂಗ್‌ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ ಎಂದು  ‘ಮೈಸೂರು ಮಸಾಲಾ’ ನಿರ್ದೇಶಕ ಅಜಯ್‌ ಸರ್ಪೇಶ್ಕರ್‌ ಹೇಳಿದ್ದಾರೆ.