ಬಾಲಣ್ಣ ಸಿನಿಮಾದಲ್ಲಿ ಶಿವಣ್ಣ ನಟಿಸೋ ಕಾಲ ಬರ್’ರ್ತೈತಿ !

ಬೆಂಗಳೂರು, ಜೂನ್ 13, 2020 (www.justkannada.in): ಸೆಂಚುರಿ ಸ್ಟಾರ್​ ಡಾ. ಶಿವರಾಜ್​ಕುಮಾರ್ ಮತ್ತು ನಟಸಿಂಹ ನಂದಮೂರಿ ಬಾಲಕೃಷ್ಣ. ಇದೀಗ ಈ ಇಬ್ಬರು ನಟರು ತೆರೆ ಮೇಲೆ ಕಾಣಿಸಿಕೊಳ್ಳುವ ಕಾಲ ಬಂದಿದೆ.

ಮತ್ತೆ ಬಾಲಯ್ಯ ಜೊತೆ ನಟಿಸುವ ಇಂಗಿತವನ್ನು ಶಿವಣ್ಣ ವ್ಯಕ್ತಪಡಿಸಿದ್ದಾರೆ. ಬಾಲಯ್ಯನ 60 ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಶಿವಣ್ಣ ಒಟ್ಟಿಗೆ ಸಿನಿಮಾ ಮಾಡೋ ಆಸೆಯನ್ನ ತೋಡಿಕೊಂಡಿದ್ದಾರೆ.

ಶಿವರಾಜ್​ಕುಮಾರ್​ ಮತ್ತು ಬಾಲಕೃಷ್ಣ ಸೋದರರಂತೆ ಇದ್ದಾರೆ. ಇದೇ ಬಾಂಧವ್ಯದಿಂದ ತೆಲುಗಿನ ಐತಿಹಾಸಿಕ ಗೌತಮಿಪುತ್ರ ಶಾತಕರ್ಣಿ ಸಿನಿಮಾದ ಹಾಡೊಂದಕ್ಕೆ ಶಿವಣ್ಣ ಹೆಜ್ಜೆ ಹಾಕಿದರು.

100ನೇ ಸಿನಿಮಾದಲ್ಲಿ ನಟಿಸಿದ್ದೆ, 200ನೇ ಸಿನಿಮಾದಲ್ಲೂ ನಟಿಸಬೇಕು. ಸಣ್ಣ ಪಾತ್ರವಾದ್ರು, ಸರಿ ದೊಡ್ಡ ಪಾತ್ರವಾದ್ರು ಸರಿ ಅಂತ ಹೇಳಿದ್ಧಾರೆ.