Monday, September 28, 2026

BDA Apartments

Home Front Page ನಟ ಶಿವಣ್ಣ ಪ್ರಚಾರಕ್ಕೆ ಅಸಮಾಧಾನ ವಿಚಾರ: ಅವರಿಬ್ಬರ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ.

ನಟ ಶಿವಣ್ಣ ಪ್ರಚಾರಕ್ಕೆ ಅಸಮಾಧಾನ ವಿಚಾರ: ಅವರಿಬ್ಬರ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ.

ಮೈಸೂರು,ಮೇ,5,2023(www.justkannada.in):  ತಮ್ಮ ಪರ ನಟ ಶಿವರಾಜ್ ಕುಮಾರ್ ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಹರಿಹಾಯ್ದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಸೋಮಣ್ಣ  ಮತ್ತು ಪ್ರತಾಪ್ ಸಿಂಹ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ಪ್ರತಾಪ್ ಸಿಂಹ ಸೋಮಣ್ಣ ಹೇಳಿಕೆಗೆ ಯಾಕೆ ಮಹತ್ವ ಕೊಟ್ಟಿದ್ದೀರಿ. ಇವರಿಬ್ಬರಿಗೆ ನಟ ಶಿವರಾಜ್ ಕುಮಾರ್ ಅವರೇ ಉತ್ತರ ಕೊಟ್ಟಿದ್ದಾರೆ. ನಾನು ಉತ್ತರ ಕೊಡುವ  ಅಗತ್ಯವಿಲ್ಲ ಎಂದರು.ನಟ ಶಿವಣ್ಣ ಪ್ರಚಾರಕ್ಕೆ ಅಸಮಾಧಾನ ವಿಚಾರ siddaramaiah siddaramaiah 2

ಸಿದ್ಧರಾಮಯ್ಯ ಪರ ಪ್ರಚಾರಕ್ಕೆ ಮುಂದಾಗಿರುವ ನಟ ದುನಿಯಾ ವಿಜಯ್ ಸಹ ಮಾತನಾಡಿ, ಶಿವಣ್ಣ ಎಲ್ಲರನ್ನೂ ಪ್ರೀತಿಸುವವರೇ. ಯಾರೇ ಕರೆದರೂ ಹೋಗುತ್ತಾರೆ.  ಶಿವಣ್ಣರದ್ದು,  ದೇವರಂತಹ ಮನಸ್ಸು ನಟ ಶಿವರಾಜ್ ಕುಮಾರ್ ಬಗ್ಗೆ ಯಾರು ಮಾತನಾಡಬಾರದು. ಶಿವಣ್ಣ ಅವರ ದೊಡ್ಡತನ  ಅದೇ ರೀತಿ ಇದೆ. ಅಣ್ಣಾವ್ರ ಮನೆ ಅಂದ್ರೆ ವಿಶೇಷ ಎಂದು ಹೇಳಿದರು.

Key words: actor- Shivanna- campaign-former CM -Siddaramaiah.