Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Cinema ನಿವಾಸಕ್ಕೆ ನಟ ಪುನೀತ್ ರಾಜ್ ಕುಮಾರ್ ಪಾರ್ಥೀವ ಶರೀರ ಶಿಫ್ಟ್: ನಾಳೆಯೇ ಸಕಲ ಸರ್ಕಾರಿ ಗೌರವದೊಂದಿಗೆ...

ನಿವಾಸಕ್ಕೆ ನಟ ಪುನೀತ್ ರಾಜ್ ಕುಮಾರ್ ಪಾರ್ಥೀವ ಶರೀರ ಶಿಫ್ಟ್: ನಾಳೆಯೇ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ..

 

ಬೆಂಗಳೂರು,ಅಕ್ಟೋಬರ್,29,2021(www.justkannada.in):  ಹೃದಯಾಘಾತದಿಂದ ನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರವನ್ನ  ಸದಾಶಿವನಗರದ ನಿವಾಸಕ್ಕೆ ಶಿಫ್ಟ್ ಮಾಡಲಾಗಿದೆ.

ಆ್ಯಂಬುಲೆನ್ಸ್ ನಲ್ಲಿ ವಿಕ್ರಂ ಆಸ್ಪತ್ರೆಯಿಂದ ಸದಾಶಿವನಗರದ ನಿವಾಸಕ್ಕೆ ನಟ ಪುನೀತ್ ರಾಜ್ ಕುಮಾರ್ ಪಾರ್ಥೀವ ಶರೀರ ರವಾನಿಸಲಾಗಿದ್ದು ನಂತರ ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್.ಅಶೋಕ್,  ನಟ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿರುವುದು ತೀವ್ರ ನೋವಿನ ಸಂಗತಿ. ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸಕಲ ಸರ್ಕಾರಿ ಗೌರವದೊಂದಿಗೆ ನಾಳೆಯೇ ಅಂತ್ಯಕ್ರಿಯೆ ಮಾಡುತ್ತೇವೆ.  ಸಿಎಂ ಸೇರಿ ಸಂಪುಟ ಸಹದ್ಯೋಗಿಗಳು ಇಲ್ಲಿದ್ದೇವೆ.  ಕುಟುಂಬಸ್ಥರ ಜತೆ ಚರ್ಚಿಸಿ ನಾಳೆಯೇ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದರು.

Key words: Actor -Punith Raj Kumar – body -shift – residence- Funeral- tomorrow