ಬೆಳಗಾವಿ ದೊಡ್ಡ ಜಿಲ್ಲೆ, ಇನ್ನೂ ಎರಡು ಸಚಿವ ಸ್ಥಾನ ನೀಡಬೇಕು- ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ,ಜುಲೈ,9,2026 (www.justkannada.in):  ಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನ ನೀಢಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಪ್ರತಿಕ್ರಿಯಿಸಿದ್ದಾರೆ.

ಇಂದು ಮಾತನಾಡಿದ  ಲಕ್ಷ್ಮೀ ಹೆಬ್ಬಾಳ್ಕರ್ ,  ಬೆಳಗಾವಿ ದೊಡ್ಡ ಜಿಲ್ಲೆ ಹೀಗಾಗಿ ಇನ್ನೂ 2 ಸಚಿವ ಸ್ಥಾನ ನೀಡಬೇಕು. ನಮ್ಮ ಜಿಲ್ಲೆಯಲ್ಲಿ 11 ಕಾಂಗ್ರೆಸ್ ಶಾಸಕರು ಆಯ್ಕೆ ಆಗಿ ಬಂದಿದ್ದಾರೆ. ಬೆಳಗಾವಿಗೆ ಕನಿಷ್ಠ ಇನ್ನೂ ಎರಡು  ಮಂತ್ರಿ ಸ್ಥಾನ ಕೊಡುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಕೃಷಿಮಂತ್ರಿಗಳು ಇಲ್ಲ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಈ ಹಿಂದೆ ಯಡಿಯೂರಪ್ಪ ಒಬ್ಬರೇ ಎಷ್ಟು ದಿನ ಒಂಟಿಯಾಗಿ ಸಿಎಂ ಆಗಿದ್ದರು. ನಮ್ಮಲ್ಲಿ ಸಿಎಂ ಜೊತೆ 13 ಸಚಿವರು ಕೆಲಸ ಮಾಡುತ್ತಿದ್ದಾರೆ. ಜನರ ಭಾವನೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.  ಸಿಎಂ ಗಳಿಗೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಮಾಹಿತಿ ಇದೆ. ಪಕ್ಷದ ಅಧ್ಯಕ್ಷರಾಗಿದ್ದಾಗ ಇಲ್ಲಿನ ಸಮಸ್ಯೆ ಏನೆಂಬುದು ಗೊತ್ತಿದೆ. ಹೀಗಾಗಿ ಅಯಾ ಕ್ಷೇತ್ರಕ್ಕೆ ಅನುಗುಣವಾಗಿ ಅಭಿವೃದ್ದಿ ಮಾಡುತ್ತಾರೆ ಎಂದರು.

Key words: Belgaum, ministerial posts, Lakshmi Hebbalkar