Thursday, October 8, 2026

BDA Apartments

Home Front Page ವಯನಾಡು ಭೂಕುಸಿತ ದುರಂತ :ಮತ್ತೊಂದು ಶವ ಪತ್ತೆ: ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ

ವಯನಾಡು ಭೂಕುಸಿತ ದುರಂತ :ಮತ್ತೊಂದು ಶವ ಪತ್ತೆ: ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ

ವಯನಾಡು,ಜುಲೈ,9,2026(www.justkannada.in)  ಕೇರಳದ ವಯನಾಡಿನ ಕಲ್ಲಾಡಿಯಲ್ಲಿ ಕಳೆದ  ಎರಡು ದಿನಗಳ ಹಿಂದೆ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಐವರ  ಪೈಕಿ ಇದೀಗ ಮತ್ತೊಂದು ಶವ ಪತ್ತೆಯಾಗಿದೆ.

ಭುಕುಸಿತದಲ್ಲಿ ನಾಪತ್ತೆಯಾಗಿರುವವವರ ಶೋಧಕಾರ್ಯದಲ್ಲಿ ಎನ್ ಡಿಆರ್ ಎಫ್  ತೊಡಗಿದ್ದು ಇದೀಗ ಮತ್ತೊಂದು ಶವ ಪತ್ತೆ ಮಾಡಿದೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇಂದು ಕಾರ್ಯಾಚರಣೆಯಲ್ಲಿ ಮಣ್ಣು ತೆಗೆಯುವಾಗ ಮತ್ತೊಂದು ಮೃತದೇಹ ಪತ್ತೆಯಾಗಿದೆ.ವಯನಾಡು ಭೂಕುಸಿತ ದುರಂತ :ಮತ್ತೊಂದು ಶವ ಪತ್ತೆ: ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿ...

ಉಳಿದ ಎರಡು ಶವಕ್ಕಾಗಿ ಎನ್ ಡಿಆರ್ ಎಫ್ ತಂಡ ಶೋಧ ಕಾರ್ಯ ಮುಂದುವರೆಸಿದೆ. ಇಂದು ಮೂರು ಶವಗಳು ಪತ್ತೆಯಾಗಿದೆ.

ಇನ್ನು ವಯನಾಡು ಭೂಕುಸಿತ ದುರಂತದಲ್ಲಿ ಗಾಯಗೊಂಡವರು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ದಿಲೀಪ್,(30) ರಜನೀಶ್(31), ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವಯನಾಡು ಭೂಕುಸಿತ ದುರಂತ jk02_new jk02 new

ಜಾರ್ಖಂಡ್ ನ ಸಂಜಯ್ ಠಾಕೂರ್ (35), ಪಶ್ಚಿಮ ಬಂಗಾಳದ ತನ್ಮಯ ಘೋಷ್ ( 28) ,  ಕೇರಳದ ಎರ್ನಾಕುಲಂನ  ಹಿರಕುಮಾರ್ (39)  ರಾಜಸ್ಥಾನದ ಸೂರಜ್ ಯಾದವ್ ಚಿಕಿತ್ಸೆ ಪಡೆಯುತ್ತಿದ್ದಾರೆ.. ಒಂದು ಮಗು ಸೇರಿ ಏಳು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Key words: Wayanad, landslide, tragedy,  death, rises to 6